ETV Bharat / state

ರಾಜ್ಯಕ್ಕೂ ಕಾಲಿಟ್ಟ ರಕ್ಕಸ ಮಿಡತೆಗಳು... ಮಧುಗಿರಿಯಲ್ಲಿ ಗಿಡ ಬೋಳಾಗಿಸಿ ಮಾಯ!

ಮಧುಗಿರಿ ತಾಲೂಕಿನಲ್ಲಿ ಅಪಾಯಕಾರಿ ಮಿಡತೆಗಳ ಗುಂಪು ಕಾಣಿಸಿಕೊಂಡಿದ್ದು, ರೈತರಲ್ಲಿ ಭೀತಿ ಮೂಡಿಸಿದೆ. ಮಧುಗಿರಿ ತಾಲೂಕಿನ ಗೌರಿಬಿದನೂರು ರಸ್ತೆಯಲ್ಲಿರುವ ಕೆಎಸ್​ಐಐಡಿಸಿ ಗೋದಾಮಿನ​ ಮುಂಭಾಗದ ಎಕ್ಕದ ಗಿಡದ ಮೇಲೆ ಕುಳಿತು ನಿಮಿಷದಲ್ಲಿ ಎಲ್ಲಾ ಎಲೆಗಳನ್ನು ತಿಂದು ಹಾಕಿವೆ.

author img

By

Published : May 30, 2020, 9:51 AM IST

Updated : May 30, 2020, 10:52 AM IST

Dangerous Insects finds in Madhugiri
ಮಧುಗಿರಿಯಲ್ಲಿ ಕಾಣಿಸಿಕೊಂಡ ಅಪಾಯಕಾರಿ ಮಿಡತೆಗಳು

ತುಮಕೂರು: ಮಹಾರಾಷ್ಟ್ರದಲ್ಲಿ ರೈತರಿಗೆ ಭಾರಿ ನಷ್ಟವನ್ನುಂಟು ಮಾಡಿರುವ ಮಿಡತೆಗಳು ಇದೀಗ ಕರ್ನಾಟಕಕ್ಕೂ ದಾಳಿ ನಡೆಸಿದ್ದು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಕಾಣಿಸಿಕೊಂಡಿವೆ.

ಮಧುಗಿರಿ ತಾಲೂಕಿನಲ್ಲಿ ಅಪಾಯಕಾರಿ ಮಿಡತೆಗಳ ಗುಂಪು ಕಾಣಿಸಿಕೊಂಡಿದ್ದು, ರೈತರಲ್ಲಿ ಭೀತಿ ಮೂಡಿಸಿದೆ. ಮಧುಗಿರಿ ತಾಲೂಕಿನ ಗೌರಿಬಿದನೂರು ರಸ್ತೆಯಲ್ಲಿರುವ ಕೆಎಸ್​ಐಐಡಿಸಿ ಗೋದಾಮಿನ​ ಮುಂಭಾಗದ ಎಕ್ಕದ ಗಿಡದ ಮೇಲೆ ಕುಳಿತು ನಿಮಿಷದಲ್ಲಿ ಎಲ್ಲಾ ಎಲೆಗಳನ್ನು ತಿಂದು ಹಾಕಿವೆ.

Dangerous Insects finds in Madhugiri
ಮಧುಗಿರಿಯಲ್ಲಿ ಕಾಣಿಸಿಕೊಂಡ ಅಪಾಯಕಾರಿ ಮಿಡತೆಗಳು

ಈ ರೀತಿ ಗುಂಪು ಗುಂಪಾಗಿ ಕಾಣಿಸಿಕೊಂಡಿರುವ ಮಿಡತೆಗಳು ಎಕ್ಕದ ಗಿಡದ ಎಲೆಗಳನ್ನು ತಿಂದು ಬರಿದು ಮಾಡಿ ನಂತರ ಕಣ್ಣಿಗೆ ಕಾಣದಂತೆ ಹಾರಿ ಹೋಗಿವೆ.

ಕ್ಯಾಲೋಟ್ರೊಪಿಸ್ ಮಿಡತೆಗಳು: ಆತಂಕ ಪಡುವ ಅಗತ್ಯವಿಲ್ಲ

ಮಿಡತೆಗಳ ಕುರಿತು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ದೌಡಾಯಿಸಿರುವ ಐಸಿಎಆರ್​ಎನ್​ಬಿಐಆರ್​ನ ಪ್ರಧಾನ ವಿಜ್ಞಾನಿಯಾಗಿರುವ ಡಾ ಮೋಹನ್, ಹಿರೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಡಾ. ಲೋಗೋನಂದನ್ ಮತ್ತು ಕೃಷಿ ಇಲಾಖೆ ಮಧುಗಿರಿ ಉಪನಿರ್ದೇಶಕ ಟಿ ಆರ್ ಅಶೋಕ್ ಸಂಪೂರ್ಣ ಮಾಹಿತಿ ಪಡೆದಿದ್ದು ಪರಿಶೀಲನೆ ನಡೆಸಿದ್ದಾರೆ.

Dangerous Insects finds in Madhugiri
ಎಕ್ಕದ ಗಿಡದ ಎಲೆಗಳನ್ನು ತಿಂದು ಬರಿದು ಮಾಡಿದ ಮಿಡತೆಗಳು

ಈ ಮಿಡತೆಗಳನ್ನು ಕ್ಯಾಲೋಟ್ರೊಪಿಸ್ ಗ್ರಾಸ್ ಹಾಫರ್ ಎಂದು ಗುರುತಿಸಲಾಗಿದ್ದು, ಇವುಗಳು ಸಾಮಾನ್ಯವಾಗಿ ಎಕ್ಕದ ಗಿಡದ ಮೇಲೆ ಕಂಡುಬರುತ್ತವೆ. ಪ್ರತಿ ಮಳೆಗಾಲದ ಆರಂಭದಲ್ಲಿ ಸಂತಾನೋತ್ಪತ್ತಿಗಾಗಿ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ. ಶೇಕಡಾ 90 ರಷ್ಟು ಭಾಗ ಎಕ್ಕದ ಗಿಡದ ಮೇಲೆ ದಾಳಿ ಮಾಡುವಂತಹ ಮಿಡತೆಗಳಾಗಿವೆ. ಬೆಳೆಗಳ ಮೇಲೆ ದಾಳಿ ಮಾಡುವುದು ತೀರಾ ಕಡಿಮೆಯಾಗಿರುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು 'ಈ ಟಿವಿ ಭಾರತ್' ಕ್ಕೆ ತಿಳಿಸಿದ್ದಾರೆ.

Last Updated : May 30, 2020, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.