ತುಮಕೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ವಿಳಂಬವಾದರೆ ಅವರ ಸಂಬಂಧಿಕರು ತುಮಕೂರಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ಕೊರೊನಾ 2ನೇ ಅಲೆ ಆರಂಭವಾದಾಗಿನಿಂದಲೂ ಇದುವರೆಗೂ 16ಕ್ಕೂ ಹೆಚ್ಚು ಶವಗಳನ್ನು ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿರುವ ಶವಾಗಾರದಲ್ಲಿ ದಹನ ಮಾಡಲಾಗಿದೆ. ಬೆಂಗಳೂರು-ತುಮಕೂರು ನಡುವೆ ಸುಮಾರು 1.45 ಗಂಟೆ ಪ್ರಯಾಣವಿದ್ದು, ಸುಲಭವಾಗಿ ಮೃತದೇಹಗಳನ್ನು ತುಮಕೂರಿಗೆ ತರಬಹುದಾಗಿದೆ.
ಅಲ್ಲದೆ ತುಮಕೂರಿನ ಬಹುತೇಕ ಸೋಂಕಿತರು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಅಂತಹ ಶವಗಳನ್ನು ಸಹ ತುಮಕೂರು ನಗರಕ್ಕೆ ತಂದು ಅಂತ್ಯಕ್ರಿಯೆ ಮಾಡುತ್ತಿದ್ದಾರೆ.