ETV Bharat / state

ತುಮಕೂರಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೆಡರಲ್​ ಮೆಲನಿನ್​ ರೋಗ..ಈ ಬಗ್ಗೆ ಶಾಸಕರು ಏನಂತಾರೆ? - tumkur news

ಜಿಲ್ಲೆಯ ಜಾನುವಾರುಗಳು ಕಳೆದ ಐದು ವರ್ಷಗಳಿಂದ ಕೆಡರಲ್​ ಮೆಲನಿನ್ ರೋಗದಿಂದ ಸಾವಿಗೀಡಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ತುಮಕೂರಿನಲ್ಲಿ ಕಾಲುಬಾಯಿ ಭೀಕರ ಕಾಯಿಲೆಗೆ ಬಲಿಯಾಗುತ್ತವೆ ರಾಸುಗಳು!
author img

By

Published : Oct 26, 2019, 12:19 PM IST

Updated : Oct 26, 2019, 4:41 PM IST

ತುಮಕೂರು: ಜಿಲ್ಲೆಯ ಜಾನುವಾರುಗಳು ಕಳೆದ ಐದು ವರ್ಷಗಳಿಂದ ಕೆಡರಲ್​ ಮೆಲನಿನ್ ರೋಗದಿಂದ ಸಾವಿಗೀಡಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ತುಮಕೂರಿನಲ್ಲಿ ಕೆಡರಲ್​ ಮೆಲನಿನ್​ ಕಾಯಿಲೆಗೆ ಬಲಿಯಾಗುತ್ತಿವೆ ರಾಸುಗಳು!

ಈ ಕುರಿತು ಮಾತನಾಡಿದ ಕುಣಿಗಲ್ ಶಾಸಕ ಡಾ.ರಂಗನಾಥ್, ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರು, ಮೋದೂರು ಗ್ರಾಮಗಳಲ್ಲಿನ ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, 5 ವಷರ್ದಲ್ಲಿ ಈ ರೋಗದಿಂದ 50 ರಿಂದ 60 ಹಸುಗಳು ಸಾಯುತ್ತಿವೆ. ಎರಡೂ ಗ್ರಾಮಗಳಲ್ಲಿರುವ ಹಸುಗಳಿಗೆ ಶೇ.100 ವಿಮೆ ಮಾಡಿಸಿಕೊಟ್ಟಿದ್ದೇನೆ. ಈ ಬಗ್ಗೆ ಪಶಸಂಗೋಪನಾ ಇಲಾಖೆಯ ಮಂತ್ರಿಗಳ ಗಮನಕ್ಕೂ ತಂದಿದ್ದೇವೆ ಹಾಗೂ ವಿಧಾನಸೌಧದಲ್ಲೂ ಈ ಬಗ್ಗೆ ಮಾತನಾಡಿದ್ದೇನೆ ಎಂದರು.

ಇನ್ನು, ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್​ ಮಾತನಾಡಿ, ಕುರಿ ಮತ್ತು ಮೇಕೆಗಳಿಂದ ಕೆಡರಲ್​ ಮೆಲನಿನ್ ಕಾಯಿಲೆ ಹರಡುತ್ತಿದೆ ಎಂದು ಸಂಶೋಧನೆಯಿಂದ ಕಂಡುಬಂದಿದೆ. ಕಾಯಿಲೆ ಬಂದ್ರೆ ಅದನ್ನು ತಡೆಗಟ್ಟಲು ಸಾಧ್ಯವಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಕುರಿ ಮತ್ತು ಮೇಕೆಗಳನ್ನು ಜಾನುವಾರುಗಳಿಂದ ದೂರ ಇರಿಸುವಂತೆ ಸಲಹೆ ನೀಡಲಾಗುತ್ತಿದೆ. ಎಲ್ಲಾ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸಲಾಗಿದೆ. ಈ ಕಾಯಿಲೆಗಳಿಂದ ಮೃತಪಟ್ಟಿರುವ 35 ಜಾನುವಾರುಗಳಿಗೆ 14 ಲಕ್ಷ ರೂ. ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Intro:Body:ಏಡ್ಸ್ ನಷ್ಟೆ ಭೀಕರ ರೋಗದಿಂದ ಸಾವನ್ನಪ್ಪುತ್ತಿವೆ ರಾಸುಗಳು….

ತುಮಕೂರು
ಏಡ್ಸ್ ನಂತೆ ಜಾನುವಾರುಗಳಲ್ಲಿಯೂ ವಿಚಿತ್ರವಾದ ಗುಣಪಡಿಸಲಾದ ರೋಗವೊಂದು ಕಾಣಿಸಿಕೊಂಡಿದೆ. ತುಮಕೂರು ಜಿಲ್ಲೆಯಲ್ಲಿ ರೋಗ ನಿಮೂಱಲನೆಗೆ ಅಸಾಧ್ಯ ಎಂಬುದು ಸಾಬೀತಾಗಿದ್ದು, ಪಶುಪಾಲನೆ ಇಲಾಖೆ ಅಧಿಕಾರಿಗಳು ಕನಿಷ್ಟ ಜಾಗೃತಿ ಮೂಡಿಸಲು ಹರಸಾಹಸ ಪಡುತ್ತಿದ್ದಾರೆ.
ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಬಹುತೇಕ ರೈತರು ಹೈನುಗಾರಿಕೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ. ಜಾನುವಾರುಗಳು ವಿಚಿತ್ರವಾದ ರೋಗದಿಂದ ಬಳಲುತ್ತಿದ್ದು ಸಾವನ್ನಪ್ಪುತ್ತಿವೆ. ಇದು ರೈತರನ್ನು ಕಂಗಾಲಾಗಿಸಿದೆ. ಕುಣಿಗಲ್ ತಾಲೂಕಿನ ಹೊಸೂರು, ಮೋದೂರು ಗ್ರಾಮಗಳಲ್ಲಿನ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. 5 ವಷಱಗಳಿಂದ ಜಾನುವಾರುಗಳು ಕೆಡರಲ್ ಮೆಲನಿನ್ ಎಂಬ ವಿಚಿತ್ರ ರೋಗದಿಂದ ಮೃತಪಡುತ್ತಿವೆ. 50ರಿಂದ 60 ಹಸುಗಳು ಇದುವರೆಗೂ ಸತ್ತುಹೋಗಿವೆ. ಈ ಕುರಿತು ಪಶುಸಂಗೋಪನಾ ಇಲಾಖೆ ಸಚಿವರ ಗಮನಕ್ಕೂ ತರಲಾಗಿದೆ. ಮನುಷ್ಯನಿಗೆ ಏಡ್ಸ್ ರೀತಿ ಈ ಖಾಯಿಲೆ ಬಂದ್ರೆ ಜಾನುವಾರುಗಳ ಸಾವು ಕಟ್ಟಿಟ್ಟ ಬುತ್ತಿಯಾಗಿದೆ. ಇದುವರೆಗೂ ಔಷಧಿಯೇ ಇಲ್ಲದಂತಾಗಿದೆ. ಕಳೆದ 6 ತಿಂಗಳಿನಿಂದ ಕುಣಿಗಲ್ ತಾಲೂಕಿನ ಎರಡೂ ಗ್ರಾಮಗಳಲ್ಲಿರುವ ರಾಸುಗಳಿಗೆ ಶೇ. 100 ವಿಮೆ ಮಾಡಿಸಿಕೊಟ್ಟಿದ್ದೇನೆ. ಒಂದು ತಿಂಗಳಿನಿಂದ 2 ಹಸುಗಳು ಈ ಗಂಭೀರವಾದ ಖಾಯಿಲೆಯಿಂದ ಸಾವನ್ನಪ್ಪಿವೆ ಎನ್ನುತ್ತಾರೆ ಕುಣಿಗಲ್ ಶಾಸಕ ಡಾ. ರಂಗನಾಥ್.
ಬೈಟ್ : ಡಾ. ರಂಗನಾಥ್, ಕುಣಿಗಲ್ ಶಾಸಕ.
ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ಈ ಕೆಡರಲ್ ಮೆಲನಿನ್ ರೋಗಕ್ಕೆ 35 ಜಾನುವಾರುಗಳು ತುತ್ತಾಗಿವೆ. ಹಸುಗಳು ಯಾಕೆ ಸಾಯುತ್ತಿವೆ ಎಂಬುದನ್ನು ಕಂಡುಹಿಡಿಯಲಾಗಿದೆ. ಕುರಿ ಮತ್ತು ಮೇಕೆಗಳಿಂದ ಈ ರೀತಿಯ ವಿಚಿತ್ರ ಖಾಯಿಲೆ ಹರಡುತ್ತಿದೆ ಎಂದು ಸಂಶೋಧನೆಯಿಂದ ಕಂಡುಬಂದಿದೆ. ಖಾಯಿಲೆ ಬಂದ್ರೆ ಅದನ್ನು ತಡೆಗಟ್ಟಲು ಸಾಧ್ಯವಿಲ್ಲದಂತಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಕುರಿ ಮತ್ತು ಮೇಕೆಗಳನ್ನು ಜಾನುವಾರುಗಳಿಂದ ದೂರ ಇರಿಸುವಂತೆ ಸಲಹೆ ನೀಡಲಾಗುತ್ತಿದೆ. ಎಲ್ಲಾ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸಲಾಗಿದೆ. ಈ ಖಾಯಿಲೆಗಳಿಂದ ಮೃತಪಟ್ಟಿರುವ 35 ಜಾನುವಾರುಗಳಿಗೆ 14 ಲಕ್ಷ ರೂ. ಪರಿಹಾರವನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಬೈಟ್ : ಪ್ರಕಾಶ್, ಜಂಟಿ ನಿದೇಱಶಕರು, ಪಶುಸಂಗೋಪನಾ ಇಲಾಖೆ.
ಒಟ್ಟಾರೆ ಏಡ್ಸ್ ನಷ್ಟೆ ಭೀಕರವಾದ ಖಾಯಿಲೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿದ್ದು,ಜಿಲ್ಲೆಯ ಹೈನೋದ್ಯಮದ ಮೇಲೆ ಭಾರಿ ಪೆಟ್ಟು ಬೀಳುವ ಸಾಧ್ಯತೆಗಳಿವೆ.

Conclusion:
Last Updated : Oct 26, 2019, 4:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.