ತುಮಕೂರು: ಪಾವಗಡದಲ್ಲಿ ಕೊರೊನಾ ಸೋಂಕಿತ ವೈದ್ಯನಿಂದ ಚಿಕಿತ್ಸೆ ಪಡೆದ ದೊಮ್ಮತಮರಿ ಗ್ರಾಮದವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕು ಹರಡದಂತೆ ಎಲ್ಲರೂ ಜಾಗೃತರಾಗೋಣ ಎಂದು ಸನ್ ರೈಸ್ ಆಸ್ಪತ್ರೆ ವೈದ್ಯ ಶ್ರೀಕಾಂತ್ ಮನವಿ ಮಾಡಿದರು.
ಹೆಲ್ಪ್ ಸೊಸೈಟಿ ಹಾಗೂ ಸನ್ ರೈಸ್ ಆಸ್ಪತ್ರೆ ಜಂಟಿಯಾಗಿ ದೊಮ್ಮತಮರಿ ಗ್ರಾಮದ ಜನತೆಗೆ ಮಾಸ್ಕ್ ವಿತರಿಸುವ ಮೂಲಕ ಕೊರೊನಾ ತಡೆಗಟ್ಟುವ ಕರಪತ್ರ ಹಾಗೂ ಸ್ಯಾನಿಟೈಸರ್ಗಳನ್ನು ಹಂಚಲಾಯಿತು.
ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಹೆದರಬೇಡಿ. ಅನಗತ್ಯವಾಗಿ ಬೇರೆಯವರ ಮನೆಗೆ ಹೋಗಬೇಡಿ. ರಾಜ್ಯ ಸರ್ಕಾರ ಅಕ್ಕಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದು ಡಾ. ಶ್ರೀಕಾಂತ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಹೆಲ್ಪ್ ಸೊಸೈಟಿ ಅಧ್ಯಕ್ಷ ಶಶಿಕಿರಣ್ ಮಾತನಾಡಿ, ಗುಂಪು ಸೇರುವುದು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಈ ತರಹದ ಯಾವುದೇ ಚಟುವಟಿಕೆಗಳನ್ನು ಮಾಡಬೇಡಿ. ಈ 15 ದಿನ ತಾಳ್ಮೆಯಿಂದ ವರ್ತಿಸಿದರೆ ನಾವೆಲ್ಲರೂ ಮುಂದಿನ ಬದುಕು ಕಾಣಬಹುದು ಎಂದು ಹೇಳಿದರು.