ETV Bharat / state

ದೇಶಕ್ಕೆ ಮಾದರಿಯಾದ ಜಿಲ್ಲಾಡಳಿತದ ಕ್ರಮ... ತುಮಕೂರಲ್ಲಿ ಮಾಡಿದ್ದೇನು?

ಆಂಧ್ರ ಪ್ರದೇಶದ ಹಿಂದೂಪುರದಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದ ವ್ಯಕ್ತಿಯ ಸಂಪರ್ಕ ಹೊಂದಿದ್ದ ತುಮಕೂರು ಜಿಲ್ಲೆಯ ಪಾವಗಡದ ದೊಮ್ಮರಪುರಿ ಗ್ರಾಮದಲ್ಲಿ ಇಬ್ಬರ ಸ್ಯಾಂಪಲ್​​ನಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

Corona: A test report of 6 people is yet to come —DC
ಕೊರೊನಾ: 6 ಜನರ ಪರೀಕ್ಷಾ ವರದಿ ಇನ್ನೂ ಬರಬೇಕಾಗಿದೆ-ಜಿಲ್ಲಾಧಿಕಾರಿ
author img

By

Published : Apr 9, 2020, 9:10 PM IST

Updated : Apr 11, 2020, 9:36 PM IST

ತುಮಕೂರು: ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಮಾರ್ಚ್ ಮೊದಲ ವಾರದಿಂದ ಸಕ್ರಿಯವಾಗಿತ್ತು. ಹೀಗಾಗಿ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸಫಲವಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

6 ಜನರ ಪರೀಕ್ಷಾ ವರದಿ ಇನ್ನೂ ಬರಬೇಕಾಗಿದೆ: ಜಿಲ್ಲಾಧಿಕಾರಿ

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲಿ ಜ್ವರದಿಂದ ಬಳಲುತ್ತಿರುವವರ ಅಂಕಿ-ಅಂಶ ಪಡೆಯಲಾಗಿದೆ. ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ತುಮಕೂರಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಮಾರ್ಚ್ ಮೊದಲ ವಾರದಿಂದ ಸಕ್ರಿಯವಾಯಿತು. ರಜಾ ದಿನಗಳಲ್ಲಿಯೂ ಎರಡು ತಾಲೂಕಿಗೆ ಒಂದರಂತೆ ಹಿರಿಯ ವೈದ್ಯಾಧಿಯನ್ನು ನೇಮಕ ಮಾಡಲಾಗಿತ್ತು.

ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿದೇಶಿ ಪ್ರವಾಸಿಗಳು, ರೋಗ ಲಕ್ಷಣಗಳಿರುವ ವ್ಯಕ್ತಿಗಳ ಮಾಹಿತಿಯನ್ನು ಪ್ರತಿ ದಿನ ಸಂಗ್ರಹಿಸಲಾಗಿದೆ. ಅಲ್ಲದೆ ರೋಗ ಪೀಡಿತರೊಂದಿಗೆ ಸಂಪರ್ಕವಿದೆಯೇ ಎಂಬ ಮಾಹಿತಿ ಲಭ್ಯವಾಗಿದ್ದು, ಅಂತಹವರನ್ನು ತಪಾಸಣೆ ಮಾಡಲು ಸಹಕಾರಿಯಾಗಿದೆ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆ್ಯಪ್​​ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಮೇಲೆ ನಿಗಾ ವಹಿಸಲಾಗಿದ್ದು, ಕಂಟ್ರೋಲ್ ರೂಮ್​ನಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದರು.

6 ಮಂದಿಯ ಪರೀಕ್ಷಾ ವರದಿ ಬರಬೇಕಿದೆ:

ಆಂಧ್ರ ಪ್ರದೇಶದ ಹಿಂದೂಪುರದಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದ ವ್ಯಕ್ತಿಯ ಸಂಪರ್ಕ ಹೊಂದಿದ್ದ ತುಮಕೂರು ಜಿಲ್ಲೆಯ ಪಾವಗಡದ ದೊಮ್ಮರಪುರಿ ಗ್ರಾಮದಲ್ಲಿ ಇಬ್ಬರ ಸ್ಯಾಂಪಲ್​​ನಲ್ಲಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಶಿರಾ ಪಟ್ಟಣದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ಇದ್ದ ಪ್ರದೇಶವನ್ನು ಕಂಟೇನ್​ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಆರು ಮಂದಿ ಶಂಕಿತರ ಸ್ಯಾಂಪಲ್​​ಗಳನ್ನು ತಪಾಸಣೆಗೆ ಕಳುಹಿಸಲಾಗಿದೆ ಎಂದಿದ್ದಾರೆ.

Last Updated : Apr 11, 2020, 9:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.