ETV Bharat / state

104 ವ್ಯಕ್ತಿಗಳ ಸ್ಯಾಂಪಲ್ ವರದಿ ನೆಗೆಟಿವ್​: ತುಮಕೂರು ಮಂದಿಗೆ ಬಿಗ್​​​ ರಿಲೀಫ್​​​​ - ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್

ಕೊರೊನಾ ಸೋಂಕು ತಗುಲಿರುವ 13 ವರ್ಷದ ಬಾಲಕನನ್ನು ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಎರಡು ಬಾರಿ ನಡೆಸುವ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

Corona: 104 Persons Sample came out as Negative Big Relief to Tumkur
ಕೊರೊನಾ: 104 ವ್ಯಕ್ತಿಗಳ ಸ್ಯಾಂಪಲ್ ನೆಗೆಟಿವ್- ತುಮಕೂರು ಮಂದಿಗೆ ಬಿಗ್​ ರಿಲೀಫ್​​​​
author img

By

Published : Mar 31, 2020, 10:08 PM IST

ತುಮಕೂರು: ಕೋವಿಡ್​​-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೆ 104 ಶಂಕಿತರ ವರದಿ ನೆಗೆಟಿವ್​​ ಎಂದು ಬಂದಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ಸೋಂಕು ತಗುಲಿರುವ 13 ವರ್ಷದ ಬಾಲಕನನ್ನು ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಎರಡು ಬಾರಿ ನಡೆಸುವ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಅಲ್ಲದೆ ಬಾಲಕನ ತಾಯಿಯನ್ನು ಸಹ ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದ್ದು, ಅವರಲ್ಲಿಯೂ ನೆಗೆಟಿವ್ ಬಂದಿದೆ. ಹೀಗಾಗಿ ಅವರಿಬ್ಬರನ್ನೂ 28 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗುವುದು ಎಂದಿದ್ದಾರೆ.

ಕೊರೊನಾ: 104 ವ್ಯಕ್ತಿಗಳ ಸ್ಯಾಂಪಲ್ ನೆಗೆಟಿವ್- ತುಮಕೂರು ಮಂದಿಗೆ ಬಿಗ್​ ರಿಲೀಫ್​​​​

ಇದುವರೆಗೆ 480 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. 334 ಮಂದಿ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. 72 ಮಂದಿ ನಿಗಾ ಘಟಕದಲ್ಲಿದ್ದಾರೆ. 35 ಮಂದಿಯು 28 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.

ಇದುವರೆಗೆ ಇಬ್ಬರು ವ್ಯಕ್ತಿಗಳಲ್ಲಿ ಪಾಸಿಟಿವ್ ಬಂದಿತ್ತು. ಅದ್ರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 20 ಕಡೆ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅತಂತ್ರ ಕಾರ್ಮಿಕರಿಗೆ 11 ಕಡೆ ವಸತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.