ETV Bharat / state

ಲಾಕ್​ಡೌನ್​ ವೇಳೆ ಸೊಪ್ಪು ಬೆಳೆಗಾರರಿಗೆ ಭರ್ಜರಿ ಲಾಭ : ಅನ್​ಲಾಕ್​ನಲ್ಲಿ ಬಳಿಕ ಕೇಳೋರೇ ಇಲ್ಲ

ಲಾಕ್​ಡೌನ್​ ವೇಳೆ ಕೆಜಿ ಕೊತ್ತಂಬರಿಗೆ 40 ರೂ.ವರೆಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿತ್ತು. ಲಾಕ್​ಡೌನ್​ ಸಡಿಲಿಕೆ ನಂತರ ಕೆಜಿ ಕೊತ್ತಂಬರಿ 15 ರೂ.ರೈತರಿಂದ ಮಾರಾಟವಾಗ್ತಿದೆ..

tumkuru leaves farmers news
ಅನ್​ಲಾಕ್​ನಲ್ಲಿ ಸೊಪ್ಪು ದರ ಕುಸಿತ
author img

By

Published : Jul 5, 2021, 5:41 PM IST

ತುಮಕೂರು : ಲಾಕ್​ಡೌನ್​ ಜಾರಿಯಲ್ಲಿದ್ದ ಸಂದರ್ಭದಲ್ಲಿ ಭರ್ಜರಿ ಲಾಭ ಗಳಿಸಿದ್ದ ತುಮಕೂರಿನ ಸೊಪ್ಪು ಬೆಳೆಗಾರರು, ಲಾಕ್​ಡೌನ್​ ತೆರವು ಗೊಳಿಸುತ್ತಿದ್ದಂತೆ ಬೆಲೆ ಪಾತಾಳಕ್ಕೆ ಕುಸಿದು ನಷ್ಟ ಎದುರಿಸುವಂತಾಗಿದೆ. ತುಮಕೂರು ನಗರದ ಹೊರವಲಯದಲ್ಲಿರುವ ಬೆಳಗುಂಬ ಭಾಗದಲ್ಲಿ ಯಥೇಚ್ಛವಾಗಿ ಸೊಪ್ಪು ಬೆಳೆಯಲಾಗುತ್ತದೆ.

ಮುಖ್ಯವಾಗಿ ದಂಟಿನ ಸೊಪ್ಪು, ಮೆಂತ್ಯ ಸೊಪ್ಪು, ಸಾಂಬಾರ್ ಸೊಪ್ಪು, ಪುದೀನ ಸೊಪ್ಪು ಇಲ್ಲಿನ ರೈತರಿಗೆ ಆದಾಯ ತಂದು ಕೊಡುವ ಬೆಳೆಯಾಗಿವೆ. ಕನಿಷ್ಠ ಅವಧಿ ಬೆಳೆಯಾದ ಸೊಪ್ಪನ್ನು ರೈತರು ಅಡಿಕೆ ತೋಟ ಹಾಗೂ ತೆಂಗಿನ ತೋಟಗಳ ನಡುವೆ ಉಪಬೆಳೆಯಾಗಿ ಸಹ ಬೆಳೆಯುತ್ತಾರೆ.

ಅನ್​ಲಾಕ್​ನಲ್ಲಿ ಸೊಪ್ಪು ಬೆಳೆಗಾರರಿಗೆ ನಷ್ಟ

ಲಾಕ್​ಡೌನ್​ ಜಾರಿಯಾಗಿದ್ದ ಸಂದರ್ಭದಲ್ಲಿ ಸೊಪ್ಪು ಪೂರೈಕೆ ಕಡಿಮೆ ಇದ್ದದ್ದರಿಂದ ಮಾರುಕಟ್ಟೆಯಲ್ಲಿ ಸೊಪ್ಪಿಗೆ ಉತ್ತಮ ಬೆಲೆ ದೊರೆಯುತ್ತಿತ್ತು. ಹೀಗಾಗಿ, ರೈತರು ಕೈತುಂಬ ಹಣ ಸಂಪಾದಿಸಿದ್ದರು. ಆದರೆ, ಲಾಕ್​ಡೌನ್​ ಸಡಿಲಿಕೆಯಾದ ನಂತರ ಸ್ಥಳೀಯ ಸೊಪ್ಪಿಗೆ ಬೆಲೆ ಕುಸಿದು ಹೋಯಿತು. ಕಾರಣ ಲಾಕ್​ಡೌನ್ ಸಡಿಲಿಕೆಯ ನಂತರ ಹೊರ ಜಿಲ್ಲೆಯಿಂದಲೂ ಸೊಪ್ಪು ಮಾರುಕಟ್ಟೆಗೆ ಬರುತ್ತಿದೆ.

ಇದ್ರಿಂದ ಸಹಜವಾಗಿ ಏರ್ಪಟ್ಟ ಪೈಪೋಟಿಯಿಂದ ಸ್ಥಳೀಯವಾಗಿ ಮಾರುಕಟ್ಟೆಗೆ ಸರಬರಾಜಾಗುತ್ತಿರುವ ಸೊಪ್ಪಿಗೆ ದರ ಕಡಿಮೆಯಾಗಿದೆ. ಅನಿವಾರ್ಯವಾಗಿ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಲಾಕ್​ಡೌನ್​ ವೇಳೆ ಕೆಜಿ ಕೊತ್ತಂಬರಿಗೆ 40 ರೂ.ವರೆಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿತ್ತು. ಲಾಕ್​ಡೌನ್​ ಸಡಿಲಿಕೆ ನಂತರ ಕೆಜಿ ಕೊತ್ತಂಬರಿ 15 ರೂ.ರೈತರಿಂದ ಮಾರಾಟವಾಗ್ತಿದೆ. ತುಮಕೂರು ಮಾರುಕಟ್ಟೆಗೆ ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಯಥೇಚ್ಛವಾಗಿ ಅವಕವಾಗುತ್ತಿರುವುದೇ ಈ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.