ETV Bharat / state

ಬೈಕ್​ ಅಪಘಾತ: ಗಾಯಗೊಂಡ ವ್ಯಕ್ತಿಗೆ ಕಾಂಗ್ರೆಸ್ ಶಾಸಕನಿಂದ ಪ್ರಾಥಮಿಕ ಚಿಕಿತ್ಸೆ - ಈಟಿವಿ ಭಾರತ್​ ಕನ್ನಡ

ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದವನ್ನು ಕಾಂಗ್ರೆಸ್​ ಶಾಸಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತಾವೇ ಪ್ರಥಮ ಚಿಕಿತ್ಸೆಯನ್ನು ನೀಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

congress-mla-gave-first-aid
ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದವನಿಗೆ ಕಾಂಗ್ರೆಸ್ ಶಾಸಕನಿಂದ ಪ್ರಾಥಮಿಕ ಚಿಕಿತ್ಸೆ
author img

By

Published : Sep 12, 2022, 1:24 PM IST

Updated : Sep 12, 2022, 2:39 PM IST

ತುಮಕೂರು : ಜಿಲ್ಲೆಯ ಕುಣಿಗಲ್ ತಾಲೂಕಿನ ಕಲ್ಲನಾಯಕನಹಳ್ಳಿಯ ಸಮೀಪ ಎರಡು ದ್ವಿಚಕ್ರ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಕಾರ್ಯದ ನಿಮಿತ್ತ ಅದೇ ದಾರಿಯಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಶಾಸಕ ಡಾ ರಂಗನಾಥ್ ಅವರು ಗಾಯಗೊಂಡಿದ್ದ ಸವಾರನನ್ನು ತಮ್ಮ ಕಾರಿನಲ್ಲೇ ಕರೆದೊಯ್ದು ತಾವೇ ಚಿಕಿತ್ಸೆ ನೀಡಿದ್ದಾರೆ.

ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದವನಿಗೆ ಕಾಂಗ್ರೆಸ್ ಶಾಸಕನಿಂದ ಪ್ರಾಥಮಿಕ ಚಿಕಿತ್ಸೆ

ಬೈಕ್​ ಸವಾರನನ್ನು ತುರ್ತು ಚಿಕಿತ್ಸೆಗಾಗಿ ತಕ್ಷಣವೇ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಅವರೇ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಉನ್ನತ ಮಟ್ಟದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಶಾಸಕರ ಈ ಮಾನವೀಯ ಗುಣಕ್ಕೆ ತುಮಕೂರು ಜಿಲ್ಲೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಬಿಜೆಪಿ ಮುಖಂಡ ಮತ್ತು ಪೊಲೀಸ್​ ಇನ್​ಸ್ಪೆಕ್ಟರ್​ ನಡುವೆ ಮಾತಿನ ಚಕಮಕಿ

Last Updated : Sep 12, 2022, 2:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.