ETV Bharat / state

ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ದೂರು ಬರುತ್ತಿವೆ : ಸಚಿವ ಮುರುಗೇಶ್ ನಿರಾಣಿ - ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲಾ ಜಿಲ್ಲೆಗಳಿಂದಲೂ ದೂರು ಬರುತ್ತಿದೆ

ಜಿಲೆಟೆನ್‌ನನ್ನು ನಿಯಮಾನುಸಾರ ಮಾಡಲಿಕ್ಕೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಗಣಿ ಮತ್ತು ಭೂ ವಿಜ್ಞಾನದ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲಾ ಟಾಸ್ಕ್ ಫೊರ್ಸ್‌ ಇನ್ನಷ್ಟು ಆ್ಯಕ್ಟೀವ್ ಮಾಡುತ್ತೇವೆ. ಆ ಕ್ರಮ ಕಂಡು ಬಂದ್ರೆ ಐದು ಪಟ್ಟು ಹೆಚ್ಚಿನ ದಂಡ ವಿಧಿಸಿ ಪರವಾನಿಗೆ ರದ್ದು ಮಾಡುತ್ತೇವೆ..

ಸಚಿವ ಮುರುಗೇಶ್ ನಿರಾಣಿ
Minister Murugesh Nirani
author img

By

Published : Feb 5, 2021, 7:27 AM IST

ತುಮಕೂರು : ರಾಜ್ಯದಲ್ಲಿ ಅಕ್ರಮ ಗಣಿಕಾರಿಕೆ ನಡೆಯುತ್ತಿರುವ ಬಗ್ಗೆ ಎಲ್ಲಾ ಜಿಲ್ಲೆಗಳಿಂದಲೂ ದೂರು ಬರುತ್ತಿವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮರಳು, ಜಲ್ಲಿ ಎಲ್ಲರಿಗೂ ಬೇಕಾಗಿದೆ. ಕಾನೂನು ಬದ್ಧವಾಗಿ ಎಲ್ಲರಿಗೂ ಸಿಗಬೇಕು.

ಈ ಕುರಿತಂತೆ ಸಭೆ ನಡೆಸಿ ಎಲ್ಲೆಲ್ಲಿ ನ್ಯೂನ್ಯತೆ ಇದೆ ಅದನ್ನು ಸರಿ ಮಾಡಿ ಕಾನೂನು ಚೌಕಟ್ಟಿನಲ್ಲಿ ಸಕ್ರಮ ಮಾಡಬೇಕೆಂಬ ಎಚ್ಚರಿಕೆ ನೀಡಲಾಗುವುದು ಎಂದರು. ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಸಣ್ಣದಾಗಿ ದರ ನಿಗದಿಪಡಿಸಿ ಮರಳನ್ನು ಎತ್ತಿನಗಾಡಿಯಲ್ಲಿ ಸ್ವಂತಕ್ಕೆ ಉಪಯೋಗಿಸಿದ್ರೆ ಯಾವುದೇ ತೊಂದರೆ ಇಲ್ಲ.

ಮರಳನ್ನು ಉಚಿತವಾಗಿ ಬಳಕೆ ಮಾಡೋಕೆ ಕಾನೂನು ತರುತ್ತಿದ್ದೇವೆ. ಒಂದೆಡೆ ಶೇಖರಿಸಿ ಟಿಪ್ಪರ್ ಮುಖಾಂತರ ಹೊರಗಡೆ ಸಾಗಿಸಿದ್ರೆ ಅದಕ್ಕೆ ದಂಡ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲೆಟೆನ್‌ನನ್ನು ನಿಯಮಾನುಸಾರ ಮಾಡಲಿಕ್ಕೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಗಣಿ ಮತ್ತು ಭೂ ವಿಜ್ಞಾನದ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲಾ ಟಾಸ್ಕ್ ಫೊರ್ಸ್‌ ಇನ್ನಷ್ಟು ಆ್ಯಕ್ಟೀವ್ ಮಾಡುತ್ತೇವೆ. ಆ ಕ್ರಮ ಕಂಡು ಬಂದ್ರೆ ಐದು ಪಟ್ಟು ಹೆಚ್ಚಿನ ದಂಡ ವಿಧಿಸಿ ಪರವಾನಿಗೆ ರದ್ದು ಮಾಡುತ್ತೇವೆ ಎಂದರು.

ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಗಗನಮುಖಿ : ಪೆಟ್ರೋಲ್​​​ 23 ಪೈಸೆ, ಡೀಸೆಲ್​ 34 ಪೈಸೆ ಏರಿಕೆ

ಪಂಚಮಸಾಲಿ ಶ್ರೀಗಳಿಬ್ಬರನ್ನೂ ಭೇಟಿ ಮಾಡಿದ್ದೇವೆ. ಸಿ ಸಿ ಪಾಟೀಲ್ ಮತ್ತು ನಾವು ಸೇರಿ ಜನಪ್ರತಿನಿಧಿಗಳು ಭೇಟಿ ಮಾಡಿ ವಿವರವಾದ ವರದಿ ನೀಡುತ್ತೇವೆ.

ಬ್ಯಾಕ್ ವರ್ಡ್ ಕಮಿಟಿ ಶಿಫಾರಸು ಮಾಡೋದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಅವರ ವರದಿ ಬಂದ ತಕ್ಷಣ ಮುಂದಿನ ಕ್ರಮ ಸಿಎಂ ಕೈಗೊಳ್ಳುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.