ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಕನಕ ವೃತ್ತ ವಿವಾದ ರಾಜಕೀಯವಾಗಿ ಬಳಸಿಕೊಳ್ಳದಂತೆ ಕುರುಬ ಸಮುದಾಯದ ಮುಖಂಡರಿಂದ ಮನವಿ ಸಲ್ಲಿಸಲಾಯಿತು.
ಚಿಕ್ಕನಾಯಕನಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುರುಬ ಸಮುದಾಯದ ಮುಖಂಡರು, ಶಿವಕುಮಾರ ಸ್ವಾಮೀಜಿ ಸರ್ಕಲ್ ಅಂತ ಹೆಸರಿಡಲು ನಾನು ಬಿಡಲ್ಲ ಅಂತ ಸಭೆಯಲ್ಲಿ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದರು. ಅಲ್ಲದೇ ಸಚಿವರು ಕಾನೂನಾತ್ಮಕವಾಗಿ ಕನಕ ವೃತ್ತ ಎಂದು ಹೆಸರಿಡಲು ಸೂಚನೆ ನೀಡಿದ್ದರು ಎಂದು ಕನಕ ಸಂಘದ ಖಜಾಂಚಿ ಮತ್ತು ಕುರುಬ ಮುಖಂಡ ಶಿವಣ್ಣ ತಿಳಿಸಿದರು.
ಆದರೆ, ಶಾಂತಿ ಸಭೆಯಲ್ಲಿದ್ದ ಕುರುಬ ಸಮುದಾಯದ ಈಶ್ವರಾನಂದಪುರಿ ಸ್ವಾಮೀಜಿ ಈಗಲೇ ನಾಮಫಲಕ ಅಳವಡಿಸಬೇಕೆಂದು ಪಟ್ಟು ಹಿಡಿದರು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಮಾಧುಸ್ವಾಮಿ ಸ್ವಾಮೀಜಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಶಿವಣ್ಣ ತಿಳಿಸಿದರು.
ಇನ್ನು ಈ ಗೊಂದಲವನ್ನು ಯಾವುದೇ ರಾಜಕಾರಣಿಗಳು ಬಳಸಿಕೊಳ್ಳಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.