ತುಮಕೂರು: ನಗರದ ಮಂಜುನಾಥ ನಗರದ ದಂಪತಿ ಚೀಟಿ ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೊದಲಿಗೆ ಬಟ್ಟೆ ವ್ಯಾಪಾರ ಮಾಡುತ್ತಿದ್ದ ರಜನಿ ಮತ್ತು ಕೃಷ್ಣಮೂರ್ತಿ ದಂಪತಿ ಅಕ್ಕ-ಪಕ್ಕದ ಮನೆಯವರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಮೊದಲಿಗೆ 1 ಲಕ್ಷ, 2 ಲಕ್ಷ, 5 ಲಕ್ಷ ರೂಪಾಯಿ ಚೀಟಿ ನಡೆಸಿದ್ದಾರೆ.
30 ವರ್ಷಗಳಿಂದ ಚೀಟಿ ಮತ್ತು ಬಡ್ಡಿ ವ್ಯವಹಾರ ನಡೆಸುತ್ತಿದ್ದ ದಂಪತಿ ಈಗ ಲಕ್ಷಾಂತರ ರೂಪಾಯಿ ಹಣ ದೋಚಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇವರಿಂದ ಮೋಸಕ್ಕೆ ಒಳಗಾಗಿರುವ ಸಂತ್ರಸ್ತರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.