ETV Bharat / state

ಡ್ರೀಮ್-11 ಆಡಲು ಸರಗಳ್ಳತನಕ್ಕೆ ಇಳಿದಿದ್ದ ಆರೋಪಿ ಅಂದರ್​

ಕಳೆದ 3 ತಿಂಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದ ರವಿಕುಮಾರ್​, ಈ ವೇಳೆ ಡ್ರೀಮ್–11 ಆಡಲು ಅಭ್ಯಾಸ ಮಾಡಿಕೊಂಡಿದ್ದನು.

chain-snacher-arrested-in-tumkur
http://10.1ಡ್ರೀಮ್-11 ಆಡಲು ಸರಗಳ್ಳತನಕ್ಕೆ ಇಳಿದಿದ್ದ ಆರೋಪಿ ಅಂದರ್​ 0.50.85//karnataka/28-June-2021/kn-tmk-03-chainsnacher-script-ka10037_28062021220744_2806f_1624898264_1105.jpg
author img

By

Published : Jun 29, 2021, 4:32 AM IST

ತುಮಕೂರು: ಡ್ರೀಮ್-11 ಗೇಮ್ ಆಡಲು ಹಣಕ್ಕಾಗಿ ಸರಗಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.

ಗೇಮ್ ಆಡಲು ಈಗಾಗಲೇ ಅನೇಕ ಬಳಿ ಸಾಲ ಮಾಡಿಕೊಂಡಿದ್ದ ರವಿಕುಮಾರ, ಸುಲಭವಾಗಿ ಹಣ ಗಳಿಕೆ ಮಾರ್ಗವಾಗಿ ಸರಗಳ್ಳತನವನ್ನು ಕಂಡುಕೊಂಡಿದ್ದನು. ಒಂಟಿ ಮನೆಗಳ ಬಳಿ ಮಹಿಳೆಯರಿಂದ ಚಿನ್ನದ ಒಡವೆಗಳನ್ನು ಕಸಿದು ಪರಾರಿಯಾಗುತ್ತಿದ್ದನು.

ಬೆಂಗಳೂರಿನ ಪೀಣ್ಯ ಮೊದಲನೇ ಹಂತದಲ್ಲಿರುವ ಸ್ಟ್ಯಾಂಡರ್ಡ್​ ಇಂಡಸ್ಟ್ರಿನಲ್ಲಿ ಲೇತ್ ಆಪರೇಟರ್ ಆಗಿ ರವಿಕುಮಾರ ಕೆಲಸ ಮಾಡಿಕೊಂಡಿದ್ದನು. ಕಳೆದ 3 ತಿಂಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದನು. ಈ ವೇಳೆ ಡ್ರೀಮ್–11 ಆಡಲು ಅಭ್ಯಾಸ ಮಾಡಿಕೊಂಡಿದ್ದನು.

ಇದನ್ನೂ ಓದಿ: ಸಿಕ್ಕಿಲ್ಲ ರೇಟು..ಕೊತ್ತಂಬರಿ ಉಚಿತವಾಗಿ ಹಂಚಿದ ಪಾಲಿಕೆ ಸದಸ್ಯ..!

ಜೂನ್​ 21ರಂದು ನಿಟ್ಟೂರು–ಸಂಪಿಗೆ ರಸ್ತೆಯಲ್ಲಿ ಮಡಿಕೆ ಖರೀದಿಸುವ ನೆಪದಲ್ಲಿ ಸಿಂಗ್ರಸಂದ್ರ ಗೇಟ್ ಬಳಿ ಮಹಿಳೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಮಹಿಳೆಯ ಕೊರಳಲ್ಲಿದ್ದ 2 ಚಿನ್ನದ ಗುಂಡುಗಳು ಹಾಗೂ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.