ETV Bharat / state

ತುಮಕೂರು: ನರಿ ಸಾಕಿದ ವ್ಯಕ್ತಿ ವಿರುದ್ದ ಪ್ರಕರಣ ದಾಖಲು - ETV Bharat Kannada News

ಕೋಳಿ ಫಾರಂನಲ್ಲಿ ನರಿ ಸಾಕಿದ ವ್ಯಕ್ತಿಯ ವಿರುದ್ಧ ಅರಣ್ಯ ಇಲಾಖೆ ದಾಳಿ ನಡೆಸಿ ಪ್ರಕರಣ ದಾಖಲಿಸಿದೆ.

Fox
ನರಿ
author img

By

Published : Feb 28, 2023, 10:20 PM IST

ತುಮಕೂರು : ವ್ಯಕ್ತಿಯೋರ್ವ ತನಗೆ ಅದೃಷ್ಟ ಒಲಿಯಲಿದೆ ಎಂದು ನಂಬಿ ನರಿಯೊಂದನ್ನು ತಂದು ತನ್ನ ಮನೆಯಲ್ಲಿ ಸಾಕಿದ್ದ. ಇದೀಗ ಈ ವ್ಯಕ್ತಿಯನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು ನರಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದಲ್ಲಿ ನಡೆದಿದೆ.

ಪ್ರತಿದಿನ ಬೆಳಗ್ಗೆ ಎದ್ದು ನರಿ ಮುಖ ನೋಡುವ ಮೂಲಕ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿ ಸಾಕಿದ್ದಾನೆ ಎನ್ನಲಾಗಿದೆ. ನಾಗವಲ್ಲಿ ಗ್ರಾಮದ ಬಳಿ ಇರುವ ಕೋಳಿ ಫಾರಂ ನಡೆಸುವ ಲಕ್ಷ್ಮಿಕಾಂತ ಎಂಬಾತನೇ ಬಂಧಿತ ಆರೋಪಿ. ನರಿ ರಕ್ಷಿಸಿರುವ ಅರಣ್ಯ ಇಲಾಖೆ, ಸಂಚಾರಿ ದಳದ ಅಧಿಕಾರಿಗಳು ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆರೋಪಿ ಏಳು ತಿಂಗಳ ಮರಿಯೊಂದನ್ನು ಗ್ರಾಮದ ಕೆರೆ ಬಳಿಯಿಂದ ಕರೆತಂದು ತನ್ನ ಕೋಳಿ ಫಾರಂನಲ್ಲಿ ಸಾಕುತ್ತಿದ್ದ.

ಜಿಲ್ಲೆಯಲ್ಲಿ ಪ್ರಸ್ತುತ ಬೇಸಿಗೆ ಆವರಿಸುತ್ತಿದ್ದು ಬೆಟ್ಟ ಗುಡ್ಡಗಳು ಹಾಗೂ ಕುರುಚಲು ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ನರಿಗಳೂ ಸೇರಿದಂತೆ ಇತರೆ ಪ್ರಾಣಿಗಳು ನೀರಿಗಾಗಿ ಆಶ್ರಯಿಸಿ ಗ್ರಾಮಗಳತ್ತ ಬರುತ್ತಿವೆ. ಅದರಲ್ಲೂ ನರಿಗಳು ಗ್ರಾಮದ ಕೆರೆಗಳ ಬಳಿ ಧಾವಿಸುತ್ತಿವೆ.

ಇದನ್ನೂ ಓದಿ :ಜಿಂಕೆಯನ್ನು ಸಾಕಿದ್ದ ವ್ಯಕ್ತಿಯ ಮನೆ ಮೇಲೆ ಅರಣ್ಯ ಸಿಬ್ಬಂದಿ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.