ETV Bharat / state

ತುಮಕೂರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು, ಒಂದೇ ಕುಟುಂಬದ ಮೂವರು ಸಾವು - ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ವೀರಾಪುರ ಗ್ರಾಮ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟದ ರಾಮಲಿಂಗಾಪುರ ಸಮೀಪದ ಕೆರೆಗೆ ಕಾರು ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.

Three died as car falls into Ramalingapuram lake in Bukkapatna
ಬುಕ್ಕಾಪಟ್ಟದ ರಾಮಲಿಂಗಾಪುರ ಕೆರೆಗೆ ಕಾರು ಬಿದ್ದು ಮೂವರು ಸಾವು
author img

By ETV Bharat Karnataka Team

Published : Oct 29, 2023, 5:10 PM IST

Updated : Oct 29, 2023, 5:42 PM IST

ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನಲ್ಲಿ ಸಂಭವಿಸಿದೆ. ಮೃತರನ್ನು ದೊಡ್ಡಣ್ಣ, ಸಣ್ಣಮ್ಮ ಮತ್ತು ಯಮುನಾ ಎಂದು ಗುರುತಿಸಲಾಗಿದೆ.

ಮೃತರು ಶಿರಾ ತಾಲೂಕು ವೀರಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಇಂದು ಬೆಳಗ್ಗೆ ಕುಟುಂಬದ ಸದಸ್ಯರು ವೀರಾಪುರದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬುಕ್ಕಾಪಟ್ಟದ ರಾಮಲಿಂಗಾಪುರ ಕೆರೆ ಸಮೀಪ ಬರುತ್ತಿದ್ದಂತೆ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ.

ಕಾರು ಕೆರೆಗೆ ಬಿದ್ದ ನಂತರ ಅದರಲ್ಲಿದ್ದ ಪ್ರವೀಣ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇನ್ನುಳಿದ ಮೂವರು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಪ್ರವೀಣ್ ಪತ್ನಿ ಯಮುನಾ, ಮಾವ ದೊಡ್ಡಣ್ಣ, ಅತ್ತೆ ಸಣ್ಣಮ್ಮ ಮೃತರಾಗಿದ್ದು, ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ, ಪರಿಶೀಲನೆ: ರಾಮಲಿಂಗಾಪುರ ಕೆರೆ ಸಮೀಪ ಬರುತ್ತಿದ್ದಂತೆ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ಹೋಟೆಲ್​ನಲ್ಲಿ ಮಧ್ಯಾಹ್ನ ಚೆಕ್​ ಇನ್ ಆಗಿದ್ದ ಪುರುಷ, ಮಹಿಳೆ ರಾತ್ರಿ ವೇಳೆಗೆ ಶವವಾಗಿ ಪತ್ತೆ

Last Updated : Oct 29, 2023, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.