ತುಮಕೂರು: ಕೊರಟಗೆರೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ಲೆಕ್ಸ್ ಕಟ್ಟುವ ವಿಚಾರವಾಗಿ ಮಂಗಳವಾರ ರಾತ್ರಿ ಕೊರಟಗೆರೆ ಪಟ್ಟಣದಲ್ಲಿ ಬೀದಿರಂಪ ಮಾಡಿಕೊಂಡಿದ್ದಾರೆ.
ಪಟ್ಟಣದ ಎಸ್ಎಸ್‌ಆರ್ ವೃತ್ತದಲ್ಲಿ ಆಗಸ್ಟ್ 18 ರಂದು ಜೆಡಿಎಸ್ ಮಾಜಿ ಶಾಸಕ ಪಿ ಆರ್ ಸುಧಾಕರ್ ಲಾಲ್ ಹುಟ್ಟು ಆಚರಣೆ ಹಿನ್ನೆಲೆಯಲ್ಲಿ ಪ್ಲೆಕ್ಸ್ ಕಟ್ಟಲು ಮುಂದಾದ ಜೆಡಿಎಸ್ ಕಾರ್ಯಕರ್ತರು ಆಗಸ್ಟ್ 8 ರಂದು ಜನ್ಮ ದಿನ ಆಚರಣೆ ಮಾಡಿಕೊಂಡಿದ್ದ ಹಾಲಿ ಶಾಸಕ ಡಾ. ಜಿ ಪರಮೇಶ‍್ವರ್ ಅವರ ಪ್ಲೆಕ್ಸ್ ತೆರವುಗೊಳಿಸಲು ಅಣಿಯಾಗಿದ್ದರು. ಈ ಸಂದರ್ಭದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯಿತು.
ಕೆಲವು ಕಾರ್ಯಕರ್ತರು ಮದ್ಯ ಸೇವಿಸಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ನಂತರ ರಾತ್ರಿ ಪಾಳೆಯದ ಪಿಎಸ್ಐ ಮಂಜುಳಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ: ಸಂಸದೀಯ ಮಂಡಳಿಯಲ್ಲಿ ಬಿಎಸ್ವೈಗೆ ಸ್ಥಾನ: ಪಕ್ಷ, ಸರ್ಕಾರದ ಹುಮ್ಮಸ್ಸು ಇಮ್ಮಡಿ ಎಂದ ಬೊಮ್ಮಾಯಿ