ತುಮಕೂರು: ಹೊಸವರ್ಷ ಹಿನ್ನೆಲೆಯಲ್ಲಿ ಆಂಜನೇಯ ದೇಗುಲಕ್ಕೆ ಆಗಮಿಸಿದ್ದ ಭಕ್ತರಿಗೆ ಕೇಕ್ ವಿತರಣೆ ಮಾಡಲಾಗಿದೆ.
ಹೊಸವರ್ಷಾರಣೆ ನಿಮಿತ್ತ ನಗರದಲ್ಲಿನ ಬಯಲಾಂಜನೇಯ ದೇಗುಲಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡಿದ್ದರು. ಇಂದು ಆಂಜನೇಯ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವೀಳ್ಯದೆಲೆ ಅಲಂಕಾರ ಮಾಡಲಾಗಿತ್ತು. ಇದೇ ವೇಳೆ ಉತ್ಸವ ಮೂರ್ತಿ ಮೆರವಣಿಗೆ ಕೂಡ ನೆರವೇರಿತು.
ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ದೇಗುಲದಲ್ಲಿ ಪ್ರಸಾದದ ರೂಪದಲ್ಲಿ ಮೊಟ್ಟೆ ರಹಿತವಾದ ಕೇಕ್ ವಿತರಣೆ ಮಾಡಲಾಗಿದ್ದು, ಗಮನಾರ್ಹ.