ತುಮಕೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಹೋದರನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವ್ಯಕ್ತಿ ರಕ್ಷಣೆ ಕೋರಿ ಪೊಲೀಸರ ಮೊರೆಹೋಗಿರುವ ಘಟನೆ ಗುಬ್ಬಿ ತಾಲೂಕಿನ ಮಾರನಹಳ್ಳಿಯಲ್ಲಿ ನಡೆದಿದೆ.
ತಲೆಗೆ 18 ಹೊಲಿಗೆ ಹಾಕಿಸಿಕೊಂಡು ತೀವ್ರವಾಗಿ ಗಾಯಗೊಂಡಿದ್ದ ಗಿರಿರಾಜ್ ಎಂಬುವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ಪ್ರಕರಣದ ಸಂಬಂಧ ಹಲ್ಲೆ ಮಾಡಿದ್ದ ಸಹೋದರ ಪ್ರಶಾಂತ್ ಮತ್ತು ರವಿಕಿರಣ್ ವಿರುದ್ಧ ಪೊಲೀಸರಿಗೆ ನೀಡಿರುವ ದೂರನ್ನು ವಾಪಸ್ ಪಡೆಯುವಂತೆ ಗಿರಿರಾಜ್ ಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಮ್ಮ ತಂದೆ-ತಾಯಿಗೂ ಪ್ರಶಾಂತ್ ಚಿತ್ರಹಿಂಸೆ ನೀಡಿದ್ದು, ಜಮೀನು ಭಾಗ ಮಾಡುವಂತೆ ಕೇಳಿದ್ದಕ್ಕೆ, ದಬ್ಬಾಳಿಕೆ ನಡೆಸುತ್ತಿದ್ದಾನೆ. ಈ ಬಗ್ಗೆ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಹಲ್ಲೆ ನಡೆದಿರುವ ಪ್ರಕರಣವನ್ನು ವಾಪಸ್ ಪಡೆದುಕೊಂಡು ರಾಜಿ ಮಾಡಿಕೊಳ್ಳುವಂತೆ ಪ್ರಶಾಂತ್ ಹಿಂಸೆ ನೀಡುತ್ತಿದ್ದಾರೆ. ಆದ್ರೆ ಶಿಕ್ಷೆಯಾಗಬೇಕು ಎಂದು ಹಲ್ಲೆಗೊಳಗಾದ ಗಿರಿರಾಜ್ ಪಟ್ಟು ಹಿಡಿದಿದ್ದು, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.