ETV Bharat / state

ಅಳಿವಿನ ಅಂಚಿನಲ್ಲಿ ಬೋರನ ಕಣಿವೆ ಜಲಾಶಯ: ದರುಸ್ತಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..! - ಬೋರನಕಣಿವೆ ಜಲಾಶಯದ ಗೋಡೆಗಳು ಶಿಥಿಲ

1892ರಲ್ಲಿ ನಿರ್ಮಾಣ ಆಗಿರುವ ತುಮಕೂರು ಜಿಲ್ಲೆಯ ಬೋರನಕಣಿವೆ ಜಲಾಶಯದ ಗೋಡೆಗಳು ಶಿಥಿಲಾವಸ್ಥೆ ತಲುಪಿದ್ದು, ಪರ್ಯಾಯ ದುರಸ್ತಿ ಕ್ರಮ ಅನುಸರಿಸದೇ ನಿರ್ಲಕ್ಷ್ಯಿಸಿದರೆ ಜಲಾಶಯಕ್ಕೆ ಭಾರಿ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

boranakanive-dam-wall-damage
ಬೋರನಕಣಿವೆ ಜಲಾಶಯ
author img

By

Published : Sep 4, 2021, 6:08 PM IST

ತುಮಕೂರು : 125 ವರ್ಷದ ಇತಿಹಾಸವುಳ್ಳ ಜಿಲ್ಲೆಯ ಚಿಕ್ಕನಾಯಕನಹಳ್ಳ ತಾಲೂಕಿನಲ್ಲಿರುವ ಬೋರನಕಣಿವೆ ಜಲಾಶಯದ ಗೋಡೆಗಳು ಶಿಥಿಲಗೊಂಡಿದ್ದು, ಅಪಾರದ ಅಂಚಿನಲ್ಲಿದೆ. ಅಲ್ಲದೆ, ಹೆಚ್ಚು ನೀರು ಸಂಗ್ರಹಿಸಿದರೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ.

ಮೈಸೂರಿನ ಕೆಆರ್​ಎಸ್​ ಜಲಾಶಯಕ್ಕಿಂತಲೂ ಮೊದಲೇ ಬೋರನಕಣಿವೆ ಜಲಾಶಯ ನಿರ್ಮಿಸಲಾಗಿದೆ. 1892ರಲ್ಲಿ ಮೈಸೂರು ಸಂಸ್ಥಾನ ಆಡಳಿತದ ವೇಳೆ ಕಲ್ಲು, ಮಣ್ಣಿನ ಇಟ್ಟಿಗೆ ಮತ್ತು ಗಾರೆಯಿಂದ ಈ ಜಲಾಶಯವನ್ನು ಕಟ್ಟಲಾಗಿದ್ದು, ಸದ್ಯ ಜಲಾಶಯದ ಒಳ ಗೋಡೆಯ ಗಾರೆ ಸಂಪೂರ್ಣ ಹಾಳಾಗಿದೆ.

ಗೋಡೆಯ ಇಟ್ಟಿಗೆಯೂ ಸಹ ನೂರಾರು ವರ್ಷಗಳಿಂದ ನೀರಿನಲ್ಲಿ ನೆನೆದು ಕರಗುತ್ತಿದ್ದು, ಮೊದಲ ಲೇಯರ್ ಇಟ್ಟಿಗೆಗಳಲ್ಲಿ ಬಹುತೇಕ ಕರಗಿಹೋಗಿವೆ. ಪರ್ಯಾಯ ದುರಸ್ತಿ ಕ್ರಮ ಅನುಸರಿಸದೇ ನಿರ್ಲಕ್ಷ್ಯಿಸಿದರೆ ಇಡೀ ಜಲಾಶಯವೇ ಶಿಥಿಲವಾಗುವ ಆತಂಕ ಎದುರಾಗಿದೆ.

ಅಳಿವಿನ ಅಂಚಿನಲ್ಲಿ ಬೋರನಕಣಿವೆ ಜಲಾಶಯ

ಈಗಾಗಲೇ ಜಲಾಶಯದ ಕ್ರೆಸ್ಟ್ ಗೇಟ್ ಸಹ ಹಾಳಾಗಿದ್ದು, ಇತ್ತಿಚಿಗಷ್ಟೆ ಹೊಸ ಗೇಟ್ ಅಳವಡಿಸಲಾಗಿದೆ. ಅಲ್ಲದೇ ಜಲಾಶಯದ ಗೋಡೆಗಳಲ್ಲಿ ಅರಳಿ ಸೇರಿದಂತೆ ವಿವಿಧ ಜಾತಿಯ ಗಿಡಗಳು ಬೆಳೆದಿದ್ದು, ತೆರವಿಗೆ ಮುಂದಾಗಬೇಕಿದೆ.

ಜಲಾಶಯದಿಂದ ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗಾಣದಾಳು, ಹೊಯ್ಸಲಕಟ್ಟೆ, ಕೆಂಕೆರೆ ಗ್ರಾಪಂ ವ್ಯಾಪ್ತಿಗೆ ಕುಡಿಯುವ ನೀರು ಕೊಡುವ ಚಿಂತನೆಯನ್ನು ಸರ್ಕಾರ ಹೊಂದಿದೆ. ಪ್ರತಿ ವರ್ಷ ಕುಡಿಯಲು ನೀರು ಕೊಡುವ ಸಲುವಾಗಿ ನದಿಗಳಿಂದ ನೀರು ಹರಿಸಿ ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ.

ಈಗ ಗೋಡೆ ದುರಸ್ತಿ ಮಾಡದೇ ನಿರ್ಲಕ್ಷ್ಯಿಸಿದರೆ ಕ್ರಮೇಣ ಗೋಡೆಯ ಇಟ್ಟಿಗೆಗಳು ನೀರಿನಲ್ಲಿ ಕರಗಿ ಜಲಾಶಯಕ್ಕೆ ಭಾರಿ ಹಾನಿ ಸಂಭವಿಸಬಹುದಾಗಿದೆ. ಜಲಾಶಯಗಳ ದುರಸ್ತಿಗೆ ತಜ್ಞರನ್ನೊಳಗೊಂಡ ಪ್ರತ್ಯೇಕ ವಿಭಾಗವಿದ್ದು, ಅವರಿಗೆ ಈಗಾಗಲೇ ಪತ್ರ ಬರೆದಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.

ಆದರೆ, ಪತ್ರ ಬರೆದು ವರ್ಷಗಳೇ ಕಳೆದಿವೆ, ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಪುನಃ ಗಮನ ಸೆಳೆಯುವ ಪ್ರಯತ್ನ ಮಾಡಿ ಶಿಥಿಲವಾಗಿರುವ ಜಲಾಶಯದ ಒಳಭಾಗದ ಗೋಡೆಯ ದುರಸ್ತಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಿದೆ.

2002 ಎಕರೆ 31 ಗುಂಟೆ ಅಚ್ಚಕಟ್ಟು ಪ್ರದೇಶವನ್ನು ಒಳಗೊಂಡಿರುವ ಈ ಅಣೆಕಟ್ಟೆಯ ಸಾಗುವಳಿ ಭೂಮಿಯು ಬೆಳ್ಳಾರ, ಬೋರನಕಣಿವೆ, ಅಂಬಾರಪುರ, ಹೊಯ್ಸಲಕಟ್ಟೆ, ದಬ್ಬಗುಂಟೆ, ಮರೆನಡು, ಮತ್ತುಗದಹಳ್ಳಿ ಹಳ್ಳಿಗಳಿಗೆ ಸೇರಿದೆ. ಜಲಾಶಯವನ್ನು ಕಲ್ಲಿನಲ್ಲಿ ನಿರ್ಮಿಸಿದ್ದು, ಗೋಡೆಯ ರಕ್ಷಣೆಗಾಗಿ ಇಟ್ಟಿಗೆ ಬಳಸಲಾಗಿದೆ.

ಆದರೆ, ನೂರಾರು ವರ್ಷಗಳಿಂದ ಇಟ್ಟಿಗೆಗಳು ನೀರಿನಲ್ಲಿ ಮುಳುಗಿದ ಪರಿಣಾಮ ಕರುಗುತ್ತಿವೆ. ಈ ವಿಚಾರ ನಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು, ಖುದ್ದು ಪರಿಶೀಲನೆ ಸಹ ಮಾಡಿದ್ದೇವೆ. ಹೇಮಾವತಿ ನೀರು ಹರಿಸುವ ಮುನ್ನ ದುರಸ್ತಿ ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.