ETV Bharat / state

'ಸಿದ್ದರಾಮಯ್ಯ, ಡಿಕೆಶಿ, ಹೆಚ್​ಡಿಕೆ, ಪರಮೇಶ್ವರ್​ ಅವರದ್ದು ಅನ್​ಎಂಪ್ಲಾಯ್​​ಮೆಂಟ್ ಗ್ರೂಪ್' - BJP MLC Ravikumar news

ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಹಾಗು ಪರಮೇಶ್ವರ್​​ಗೆ ಸದ್ಯ ಕೆಲಸ ಇಲ್ಲ. ಅವರದ್ದು ಅನ್​ಎಂಪ್ಲಾಯ್​​ಮೆಂಟ್ ಗ್ರೂಪ್. ಪ್ರತಿದಿನ ಏನಾದರೂ ಕಮೆಂಟ್ ಮಾಡಿ ಊಟ, ತಿಂಡಿ ತಿನ್ನಬೇಕು ಎಂದು ಬಿಜೆಪಿ ಎಂಎಲ್​​ಸಿ ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

BJP MLC Ravikumar teases congress leaders
ಬಿಜೆಪಿ ಎಂಎಲ್​​ಸಿ ರವಿಕುಮಾರ್ ಹೇಳಿಕೆ
author img

By

Published : Nov 23, 2021, 8:31 PM IST

ತುಮಕೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಕಮಿಷನ್‌ ಶೇ 30-40 ಇತ್ತು. ಹೀಗಾಗಿ ಕಮಿಷನ್ ವಿಚಾರವಾಗಿ ಸಿದ್ದರಾಮಯ್ಯ ಮೇಲೆ 37 ಕೇಸ್​​ಗಳಿವೆ. ಸಿದ್ದರಾಮಯ್ಯ ಡಿಕೆಶಿ ಗೌರವಯುತವಾದಂತಹ ಟೀಕೆ ಟಿಪ್ಪಣಿ ಮಾಡಲಿ, ಅವರ ಆರೋಗ್ಯಕ್ಕೂ ಒಳ್ಳೆಯದು ಎಂದು ಬಿಜೆಪಿ ಎಂಎಲ್​​ಸಿ ರವಿಕುಮಾರ್ ಹೇಳಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಯಡಿಯೂರಪ್ಪ ಪ್ರವಾಹ ಬಂದಾಗ 5 ಲಕ್ಷ ರೂ ಪರಿಹಾರ ನೀಡಿದ್ದರು. ದೇಶದಲ್ಲಿ ಯಾವ ಸಿಎಂ ಕೂಡ ಇಷ್ಟು ಪರಿಹಾರ ನೀಡಿರಲಿಲ್ಲ. ಪರಿಹಾರ ಬಗ್ಗೆ ಕುಮಾರಸ್ವಾಮಿ ಯಾವತ್ತೂ ಮಾತನಾಡಲ್ಲ, ಯಾಕೆಂದರೆ, ಅವರಿಗೆ ವಿರೋಧ ಆಗುತ್ತೆ ಅಂತ. ಅವರಿಗೆ ಬೇಕಾದ ಅಂಶಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅವರು ಯಾಕೆ ಮನೆಯಲ್ಲಿ ಕುಳಿತಿದ್ದಾರೆ ಎಂದರು.

ಅನ್​ಎಂಪ್ಲಾಯ್​​ಮೆಂಟ್ ಗ್ರೂಪ್:

ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಹಾಗು ಪರಮೇಶ್ವರ್​​ಗೆ ಸದ್ಯ ಕೆಲಸ ಇಲ್ಲ. ಅವರದ್ದು ಅನ್​ಎಂಪ್ಲಾಯ್​​ಮೆಂಟ್ ಗ್ರೂಪ್. ಪ್ರತಿದಿನ ಏನಾದರೂ ಕಮೆಂಟ್ ಮಾಡಿ ಊಟ, ತಿಂಡಿ ತಿನ್ನಬೇಕು. ಅವರಿಗೆ ಕೆಲಸ ಇಲ್ಲ, ಹೀಗಾಗಿ ಕಮೆಂಟ್​​ ಮಾಡ್ತಾರೆ ಎಂದರು.

ಪರಮೇಶ್ವರ್ ಆರೋಪ ಚುನಾವಣೆ ಮುನ್ನವೇ ಸೋಲು ಒಪ್ಪಿಕೊಂಡಂತೆ. ಮೂರು ಪಕ್ಷಗಳು ಕೂಡ ನಾಮಪತ್ರ ಸಲ್ಲಿಕೆ ಮಾಡಿದೆ. ಒಳ ಒಪ್ಪಂದ ಆಗಿದ್ದರೆ ಜೆಡಿಎಸ್​​ನವರು ಯಾಕೆ ಅಭ್ಯರ್ಥಿಯನ್ನು ಹಾಕ್ತಿದ್ದರು. ಜೆಡಿಎಸ್​​ನಲ್ಲಿ ಅಭ್ಯರ್ಥಿ ಇರಲಿಲ್ಲ, ಹೀಗಾಗಿ ಏಳು ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಿದ್ದಾರೆ. ಬಿಜೆಪಿ ಯಾವುದೇ ಒಪ್ಪಂದದಿಂದ ಬೆಳೆದು ಬಂದ ಪಕ್ಷ ಅಲ್ಲ. ಸ್ವಂತ ಶ್ರಮ ಬೆವರಿನಿಂದ ಬೆಳೆದ ಪಕ್ಷ ಎಂದರು.

ತ್ರಿವರ್ಣ ಧ್ವಜ ನಮ್ಮದು ಅಂತಾ ಡಿಕೆಶಿ ಹೇಳಿಕೆ ವಿಚಾರಕ್ಕೆ, ಇದು ಡಿ.ಕೆ.ಶಿವಕುಮಾರ್​ ಅವರ ದಡ್ಡತನದ ಹೇಳಿಕೆ. ಯಾವುದೇ ವಿಚಾರ ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸಿ ಮಾತನಾಡಬೇಕು. ಅದು ದೇಶದ ತ್ರಿವರ್ಣ ಧ್ವಜ ಎಂದರು. ಗಾಂಧೀಜಿ ಅಂಬೇಡ್ಕರ್ ಸೇರಿದಂತೆ ದೇಶದ ಜನರ ಒಪ್ಪಿಗೆ ಪಡೆದು ತೀರ್ಮಾನ ಮಾಡಲಾಗಿದೆ. ಡಿ.ಕೆ.ಶಿವಕುಮಾರ್​ ಅವರದ್ದು ಮೂರ್ಖತನದ ಹೇಳಿಕೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.