ETV Bharat / state

ಬಿಜೆಪಿ ಸರ್ಕಾರ ಜನರ ಆಶಯದಂತೆ ನಡೆದುಕೊಳ್ಳದೆ ಮೋಸ ಮಾಡಿದೆ: ದೊರೆರಾಜು - ತುಮಕೂರು ಸುದ್ದಿ

ಸಂವಿಧಾನದ ಆಶಯದಂತೆ ನಾವು ಸರ್ಕಾರವನ್ನ ನಡೆಸುತ್ತೇವೆ ಎಂದು ಸರ್ಕಾರ ರಚಿಸಿದ ಬಿಜೆಪಿ, ಜನರ ಆಶಯಗಳಂತೆ ನಡೆದುಕೊಳ್ಳದೆ ಜನರಿಗೆ ಮೋಸ ಮಾಡಿದ್ದು, ಆ ಮೂಲಕ ಭಾರತೀಯ ಸಂವಿಧಾನಕ್ಕೆ ದ್ರೋಹ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಹೋರಾಟಗಾರ ದೊರೆರಾಜು ಅಸಮಾಧಾನ ವ್ಯಕ್ತಪಡಿಸಿದರು.

Social Fighter Dhoreraju
ಸಾಮಾಜಿಕ ಹೋರಾಟಗಾರ ದೊರೆರಾಜು
author img

By

Published : Feb 5, 2020, 6:53 PM IST

ತುಮಕೂರು: ಸಂವಿಧಾನದ ಆಶಯದಂತೆ ನಾವು ಸರ್ಕಾರವನ್ನ ನಡೆಸುತ್ತೇವೆ ಎಂದು ಸರ್ಕಾರ ರಚಿಸಿದ ಬಿಜೆಪಿ ಜನರ ಆಶ್ರಯಗಳಂತೆ ನಡೆದುಕೊಳ್ಳದೆ ಜನರಿಗೆ ಮೋಸ ಮಾಡಿದ್ದು, ಆ ಮೂಲಕ ಭಾರತೀಯ ಸಂವಿಧಾನಕ್ಕೆ ದ್ರೋಹ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಹೋರಾಟಗಾರ ದೊರೆರಾಜು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜನರ ಆಶ್ರಯಗಳಂತೆ ನಡೆದುಕೊಳ್ಳದೆ ಮೋಸ ಮಾಡಿದೆ: ದೊರೆರಾಜು

ಹೋರಾಟದೊಂದಿಗೆ ನಾವಿದ್ದೇವೆ ಎಂಬ ಶೀರ್ಷಿಕೆಯಡಿ ಸಿಎಎ, ಎನ್ಆರ್​ಸಿ ಮತ್ತು ಎನ್​ಪಿಆರ್​ ವಿರೋಧಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ದೊರೆರಾಜು, ನಮ್ಮದು ಪ್ರಜಾಪ್ರಭುತ್ವ ದೇಶ. ಸರ್ಕಾರಗಳು ಪ್ರಜೆಗಳ ಮಾತನ್ನು ಕೇಳಬೇಕು. ಆದರೆ ಈಗಿನ ಬಿಜೆಪಿ ಸರ್ಕಾರ ಪ್ರಜೆಗಳ ಮಾತನ್ನು ಕೇಳುತ್ತಿಲ್ಲ. ದೇಶದಲ್ಲಿನ ಎಲ್ಲಾ ಸಮುದಾಯದವರು ಎನ್ಆರ್​ಸಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಸರ್ಕಾರ ಯಾವುದೇ ರೀತಿಯ ಮನ್ನಣೆ ನೀಡುತ್ತಿಲ್ಲ. ಪೊಲೀಸರ ಮುಖಾಂತರ ಹೋರಾಟಗಾರರನ್ನು ಎದುರಿಸುವ ತಂತ್ರ ಬಿಜೆಪಿ ಸರ್ಕಾರ ಮಾಡುತ್ತಿದೆ. ನಾವು ಇದನ್ನು ಖಂಡಿಸುವ ಮೂಲಕ ಎನ್ಆರ್​ಸಿ ವಿರುದ್ಧ ಹೋರಾಟ ಮುಂದುವರೆಸಬೇಕು ಎಂದು ತಿಳಿಸಿದರು.

ಸಂವಿಧಾನದ ಆಶಯದಂತೆ ನಾವು ಸರ್ಕಾರವನ್ನು ನಡೆಸುತ್ತೇವೆ ಎಂದು ಹೇಳಿ ಸರ್ಕಾರ ರಚಿಸಿದ ಬಿಜೆಪಿ ಜನರ ಆಶಯಗಳಂತೆ ನಡೆದುಕೊಳ್ಳದೆ ಜನರಿಗೆ ಮೋಸ ಮಾಡಿದೆ. ಆ ಮೂಲಕ ಭಾರತೀಯ ಸಂವಿಧಾನಕ್ಕೆ ಬಿಜೆಪಿ ಸರ್ಕಾರ ದ್ರೋಹ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಮುಸ್ಲಿಮರು ಎಂದರೆ ಉಗ್ರಗಾಮಿಗಳು, ಹಿಂದು ವಿರೋಧಿಗಳು ಎಂಬ ಹೇಳಿಕೆಗಳನ್ನ ನೀಡುವ ಮೂಲಕ ಧರ್ಮಗಳ ನಡುವೆ ವಿರೋಧಿ ಭಾವನೆಗಳನ್ನ ಹುಟ್ಟುಹಾಕಿ, ಜನರಿಗೆ ಮಂಕು ಬೂದಿಯನ್ನ ಎರಚುವ ಮೂಲಕ ಜನರನ್ನ ಧಾರ್ಮಿಕವಾಗಿ ವಿಭಜನೆ ಮಾಡುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು..

ನಂತರ ಮಾತನಾಡಿದ ಎಸ್​ಯುಸಿಐ ರಾಜ್ಯ ಕಾರ್ಯದರ್ಶಿ ಶಶಿಧರ್, ಬಿಜೆಪಿ ಸರ್ಕಾರ ಬ್ಯಾಂಕ್​ಗಳನ್ನು ದಿವಾಳಿ ಅಂಚಿಗೆ ತಂದಿದೆ. ಸರ್ಕಾರದ ರೈಲ್ವೆ,ಆಸ್ಪತ್ರೆ ಮುಂತಾದವುಗಳನ್ನು ಖಾಸಗೀಕರಣ ಮಾಡಲಾಗುತ್ತದೆ. ಇದರ ಜೊತೆಗೆ ದೇಶದಲ್ಲಿ ನಿರುದ್ಯೋಗ, ಕಿತ್ತು ತಿನ್ನುವ ಬಡತನ ಇವುಗಳ ವಿರುದ್ಧ ದೇಶದ ಜನರು ಸರ್ಕಾರದ ವಿರುದ್ಧದ ದಂಗೆ ಏಳುವುದನ್ನು ತಡೆಯಲು ದೇಶದ ಜನರ ಗಮನವನ್ನ ಬೇರೆಡೆ ಸೆಳೆಯಲು ಇಂತಹ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಧರ್ಮ-ಧರ್ಮಗಳ ನಡುವೆ ಜಾತಿ-ಕೋಮುಗಳ ನಡುವೆ ಸಂಘರ್ಷ ಉಂಟು ಮಾಡಲು ಈ ಕಾಯಿದೆಗಳನ್ನ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Intro:ತುಮಕೂರು: ಸಂವಿಧಾನದ ಆಶಯದಂತೆ ನಾವು ಸರ್ಕಾರವನ್ನು ನಡೆಸುತ್ತೇವೆ ಎಂದು ಹೇಳಿ ಸರ್ಕಾರ ರಚಿಸಿದ ಬಿಜೆಪಿ ಪಕ್ಷ. ಪ್ರಮಾಣವಚನದಂತೆ ಜನರ ಆಶ್ರಯಗಳಂತೆ ನಡೆದುಕೊಳ್ಳದೆ ಜನರಿಗೆ ಮೋಸ ಮಾಡಿದ್ದಾರೆ. ಆ ಮೂಲಕ ಭಾರತೀಯ ಸಂವಿಧಾನಕ್ಕೆ ಬಿಜೆಪಿ ಸರ್ಕಾರ ದ್ರೋಹ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಹೋರಾಟಗಾರ ದೊರೆರಾಜು ಅಸಮಾಧಾನ ವ್ಯಕ್ತಪಡಿಸಿದರು.

Body:ಹೋರಾಟದೊಂದಿಗೆ ನಾವಿದ್ದೇವೆ ಎಂಬ ಶೀರ್ಷಿಕೆಯಡಿ ಸಿ.ಎ.ಎ, ಎನ್.ಆರ್.ಸಿ, ಮತ್ತು ಎನ್.ಪಿ.ಪಿ ವಿರೋಧಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದೊರೆರಾಜು, ನಮ್ಮದು ಪ್ರಜಾಪ್ರಭುತ್ವ ದೇಶ. ಸರ್ಕಾರಗಳು ಪ್ರಜೆಗಳ ಮಾತನ್ನು ಕೇಳಬೇಕು, ಆದರೆ ಈಗಿನ ಬಿಜೆಪಿ ಸರ್ಕಾರ ಪ್ರಜೆಗಳ ಮಾತನ್ನು ಕೇಳುತ್ತಿಲ್ಲ. ದೇಶದಲ್ಲಿನ ಎಲ್ಲಾ ಸಮುದಾಯದವರು ಎನ್.ಆರ್.ಸಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಸರ್ಕಾರ ಯಾವುದೇ ರೀತಿಯ ಮನ್ನಣೆ ನೀಡುತ್ತಿಲ್ಲ. ಪೊಲೀಸರ ಮುಖಾಂತರ ಹೋರಾಟಗಾರರನ್ನು ಎದುರಿಸುವ ತಂತ್ರ ಬಿಜೆಪಿ ಸರ್ಕಾರ ಮಾಡುತ್ತಿದೆ. ನಾವು ಇದನ್ನು ಖಂಡಿಸುವ ಮೂಲಕ ಎನ್.ಆರ್.ಸಿ ವಿರುದ್ಧ ಹೋರಾಟ ಮುಂದುವರೆಸಬೇಕು ಎಂದು ತಿಳಿಸಿದರು.

ಸಂವಿಧಾನದ ಆಶಯದಂತೆ ನಾವು ಸರ್ಕಾರವನ್ನು ನಡೆಸುತ್ತೇವೆ ಎಂದು ಹೇಳಿ ಸರ್ಕಾರ ರಚಿಸಿದ ಬಿಜೆಪಿ ಪಕ್ಷ. ಪ್ರಮಾಣವಚನದಂತೆ ಜನರ ಆಶ್ರಯಗಳಂತೆ ನಡೆದುಕೊಳ್ಳದೆ ಜನರಿಗೆ ಮೋಸ ಮಾಡಿದ್ದಾರೆ. ಆ ಮೂಲಕ ಭಾರತೀಯ ಸಂವಿಧಾನಕ್ಕೆ ಬಿಜೆಪಿ ಸರ್ಕಾರ ದ್ರೋಹ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಮರು ಎಂದರೆ ಉಗ್ರಗಾಮಿಗಳು, ಹಿಂದು ವಿರೋಧಿಗಳು ಎಂಬ ಹೇಳಿಕೆಗಳನ್ನು ನೀಡುವ ಮೂಲಕ ಧರ್ಮಗಳ ನಡುವೆ ವಿರೋಧಿ ಭಾವನೆಗಳನ್ನು ಹುಟ್ಟುಹಾಕಿ, ಜನರಿಗೆ ಮಂಕು ಬೂದಿಯನ್ನು ಎರಚುವ ಮೂಲಕ ಧಾರ್ಮಿಕ ಭಾವನೆಯಿಂದ ಜನರನ್ನು ಧಾರ್ಮಿಕವಾಗಿ ವಿಭಜನೆ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೈಟ್: ದೊರೆರಾಜು, ಸಾಮಾಜಿಕ ಹೋರಾಟಗಾರ

ನಂತರ ಮಾತನಾಡಿದ ಶಶಿಧರ್, ಬ್ಯಾಂಕ್ ಗಳನ್ನು ದಿವಾಳಿ ಹಂಚಿಗೆ ತಂದಿದ್ದಾರೆ. ಸರ್ಕಾರದ ರೈಲ್ವೆ, ಆಸ್ಪತ್ರೆ ಮುಂತಾದವುಗಳನ್ನು ಖಾಸಗೀಕರಣ ಮಾಡಲಾಗುತ್ತದೆ. ಇದರ ಜೊತೆಗೆ ದೇಶದಲ್ಲಿ ನಿರುದ್ಯೋಗ, ಕಿತ್ತುತಿನ್ನುವ ಬಡತನ ಇವುಗಳ ವಿರುದ್ಧ ದೇಶದ ಜನರು ಸರ್ಕಾರದ ವಿರುದ್ಧದ ದಂಗೆ ಏಳುವುದನ್ನು ತಡೆಯಲು ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಧರ್ಮ-ಧರ್ಮಗಳ ನಡುವೆ, ಜಾತಿ ಕೋಮುಗಳ ನಡುವೆ ಸಂಘರ್ಷ ಉಂಟು ಮಾಡಲು ಈ ಕಾಯಿದೆಗಳನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೈಟ್: ಶಶಿಧರ್, ರಾಜ್ಯ ಕಾರ್ಯದರ್ಶಿ, ಎಸ್.ಯು.ಸಿ.ಐ(ಸಿ)

Conclusion:ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.