ತುಮಕೂರು: ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾನ್ನಪ್ಪಿರುವ ಘಟನೆ ತಿಪಟೂರು ತಾಲೂಕಿನ ಕೈದಾಳ್ ಗೇಟ್ ಬಳಿ ನಡೆದಿದೆ.
ಮೃತ ಸವಾರ ತಿಪಟೂರು ನಗರ ಬಳಿಯ ಆದಿ ಲಕ್ಷ್ಮೀ ನಗರದ ದಾದಾಪೀರ್(25) ಎಂದು ಗುರುತಿಸಲಾಗಿದೆ. ಆ್ಯಕ್ಟೀವ್ ಹೊಂಡ ಹಾಗೂ ಸಿಟಿ 100 ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಮತ್ತೊಂದು ಬೈಕ್ನ ಸವಾರ ತುರುವೆ ಕೆರೆ ನಿವಾಸಿ ನವೀನ್ ತೀವ್ರ ಗಾಯಗೊಂಡಿದ್ದು, ತಿಪಟೂರು ಸರ್ಕಾರಿ ಆಸ್ಪತ್ರಗೆ ದಾಖಲು ಮಾಡಲಾಗಿದೆ.
ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.