ತುಮಕೂರು : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದೇವರಾಯನ ದುರ್ಗ ಅರಣ್ಯ ಪ್ರದೇಶ ಪ್ರಸ್ತುತ ಮುಂಗಾರು ಮಳೆಯ ಸಿಂಚನದೊಂದಿಗೆ ಹಸಿರಿನಿಂದ ಕಂಗೊಳಿಸುತ್ತಿದೆ.
ದೇವರಾಯನದುರ್ಗ ಅರಣ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಸಸ್ಯ ಸಂಪತ್ತು ಮಲೆನಾಡಿನ ವಾತಾವರಣ ಸೃಷ್ಠಿಸಿದೆ. ಅರಣ್ಯ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ಸಾಗುತ್ತಿದ್ರೆ, ಸಮೃದ್ಧ ಸಸ್ಯರಾಶಿ ಮನಸ್ಸಿಗೆ ಮುದ ನೀಡುತ್ತದೆ. ಸ್ವಚ್ಛಂದ ಪರಿಸರದಲ್ಲಿ ಚಿರತೆ ಸೇರಿ ವಿವಿಧ ವನ್ಯ ಮೃಗಗಳು ವಿಹರಿಸುತ್ತಿರುವುದನ್ನೂ ಕಣ್ತುಂಬಿಕೊಳ್ಳಬಹುದು.
ಅಪರೂಪದ ಗಿಡ-ಮರಗಳಿಂದ ತುಂಬಿರುವ ಇಲ್ಲಿನ ಅರಣ್ಯ ಸಂಪತ್ತು ಮಳೆಗಾಲದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.