ತುಮಕೂರು: ಜಿಲ್ಲೆಯಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು ಗ್ರಾಮದ ಸಮೀಪ ರಾಜಾರೋಷವಾಗಿ ಓಡಾಡುತ್ತಿವೆ. ನಗರದ ಹೊರವಲಯದ ಬಸ್ ತಂಗುದಾಣದಲ್ಲಿ ಕರಡಿಯೊಂದು ಮಲಗಿದ್ದ ದೃಶ್ಯ ಈಗ ವೈರಲ್ ಆಗಿದೆ.
ಬಸ್ ತಂಗುದಾಣದಲ್ಲಿ ದೈತ್ಯ ಕರಡಿಯನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ. ಸಿದ್ದಗಂಗಾ ಕ್ರಾಸ್ನ ಬಸ್ ತಂಗುದಾಣದಲ್ಲಿ ಕರಡಿ ಮಲಗಿರುವುದನ್ನು ಕಂಡು ದಾರಿಹೋಕರು ವಿಡಿಯೋ ಸೆರೆಹಿಡಿದಿದ್ದಾರೆ.
ಜಿಲ್ಲೆಯ ದೇವರಾಯನದುರ್ಗ, ನಾಮದ ಚಿಲುಮೆ ಪ್ರವಾಸಕ್ಕೆ ಜನರು ಹೆಚ್ಚಾಗಿ ಬರುತ್ತಾರೆ. ಈ ಭಾಗದಲ್ಲಿ ಕರಡಿ, ಚಿರತೆ, ಕಾಡು ಪ್ರಾಣಿಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಬೇಕಿದೆ.