ತುಮಕೂರು: ಪಾವಗಡ ತಾಲೂಕು ಪಳವಳ್ಳಿ ಕಟ್ಟೆಯ ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಮನೆಗೆ ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ವೈಯಕ್ತಿಕವಾಗಿ ಮೃತ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ.ಗಳ ಪರಿಹಾರ ನೀಡಿದರು. ನಂತರ ಸಂಜೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವರು ದಾಖಲಾದ ಗಾಯಾಳುಗಳಿಗೆ ತಲಾ 20,000 ರೂ.ಗಳ ಪರಿಹಾರವನ್ನು ವೈಯಕ್ತಿಕವಾಗಿ 17 ಗಾಯಾಳುಗಳಿಗೆ ನೀಡಿದರು.
ಇದನ್ನೂ ಓದಿ: ತುಮಕೂರು ಬಸ್ ದುರಂತ : ಈ ಬಗ್ಗೆ ಗಾಯಾಳು ವಿದ್ಯಾರ್ಥಿ ಹೇಳಿದ್ದೇನು?