ತುಮಕೂರು: ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ವಿಭಿನ್ನ ಪ್ರಯತ್ನ ಮಾಡಿದ್ದಾರೆ.
ಕೋವಿಡ್-19 ಬಗ್ಗೆ ಅರಿವು ಮೂಡಿಸುವ ಸಲುವಾಗಿ ಚಿಕ್ಕನಾಯ್ಕನಹಳ್ಳಿ ಪಟ್ಟಣದ ಶೆಟ್ಟಿಕೆರೆ ಗೇಟ್, ಸರ್ಕಲ್ ನಲ್ಲಿ ರಸ್ತೆ ಮೇಲೆ ಕೊರೊನಾ ವೈರಸ್ ನ ಕಲ್ಪಿತ ಚಿತ್ರ ಬಿಡಿಸಿದ್ದಾರೆ.
'ಬೀದಿಗೆ ಬಂದ್ರೆ ನೀನು..ಮನೆಗೆ ಬರುವೆ ನಾನು', ನಡುವೆ ಅಂತರ ಕಾಯ್ದುಕೊಳ್ಳಿ ಎಂಬ ಸ್ಲೋಗನ್ ಗಳನ್ನು ಬರೆದು ಜಾಗೃತಿ ಮೂಡಿಸಿದ್ದಾರೆ. ಕಲಾವಿದರಾದ ಶಿಲ್ಪಿ ವಿಶ್ವನಾಥ್, ಜಗದೀಶ್ ಹೊಸಪಾಳ್ಯ, ರಾಜು, ಗಂಗಾಧರ್ ಚಿತ್ರ ಬಿಡಿಸಿದ್ದು ಪೊಲೀಸರ ಕೂಡಾ ಇದಕ್ಕೆ ಸಾಥ್ ನೀಡಿದ್ದಾರೆ.