ತುಮಕೂರು: ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಜೂಜುಕೋರರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ನಡೆದಿದೆ.
![attack on police who attacked gambling](https://etvbharatimages.akamaized.net/etvbharat/prod-images/kn-tmk-01-assualt-script-7202233_22042020113137_2204f_1587535297_1081.jpg)
ಶಿರಾ ತಾಲೂಕಿನ ಜಾನಕಲ್ ಗ್ರಾಮದ ಕೆರೆ ಅಂಗಳದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಾಲ್ವರು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರನ್ನು ಕಂಡು ಜೂಜುಕೋರರು ಕಾಲ್ಕಿತ್ತಿದ್ದಾರೆ. ಹಿಂಬಾಲಿಸಿಕೊಂಡು ಹೋದ ಪೊಲೀಸ್ ಪೇದೆ ಮಂಜುನಾಥ್ಗೆ, ಜೂಜುಕೋರರು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ಶಿರಾ ಪೊಲೀಸ್ ಠಾಣೆಯ ಪೇದೆ ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದು,ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
![attack on police who attacked gambling](https://etvbharatimages.akamaized.net/etvbharat/prod-images/kn-tmk-01-assualt-script-7202233_22042020113137_2204f_1587535297_466.jpg)
ಈ ಸಂಬಂಧ 11 ಮಂದಿ ಜೂಜುಕೋರರ ಮೇಲೆ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.