ETV Bharat / state

ತುಮಕೂರು: ಎಟಿಎಂ ಯಂತ್ರವನ್ನೇ ಕದ್ದೊಯ್ದ ಖದೀಮರು

ಕಳೆದ ರಾತ್ರಿ ತುಮಕೂರು ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಖದೀಮರು ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದಾರೆ. ಇಂಡಿಯನ್ ಓವರ್​ಸೀಸ್​ ಬ್ಯಾಂಕ್​​ನ ಎಟಿಎಂ ಮಷಿನ್ ಕಳ್ಳತನವಾಗಿದೆ.

atm-machine-theft-in-tumakur
ಎಟಿಎಂ ಮಷಿನ್ ಕಳ್ಳತನ
author img

By

Published : Jan 18, 2021, 10:27 AM IST

Updated : Jan 18, 2021, 3:31 PM IST

ತುಮಕೂರು: ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಎಟಿಎಂ ಮಷಿನ್ ಅನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು ಇಂಡಿಯನ್ ಓವರ್​ಸೀಸ್ ಬ್ಯಾಂಕಿಗೆ ಸಂಬಂಧಿಸಿದ ಎಟಿಎಂ ಯಂತ್ರ ಕಳ್ಳತನವಾಗಿದೆ.

ತುಮಕೂರು: ಎಟಿಎಂ ಯಂತ್ರವನ್ನೇ ಕದ್ದೊಯ್ದ ಖದೀಮರು

ಎಟಿಎಂ ಇದ್ದ ಸ್ಥಳದಲ್ಲಿ ಬ್ಯಾಂಕ್ ಹಾಗೂ ಜಿಮ್ ಇದ್ದು ಬೆಳಗ್ಗೆ 5.45 ರ ಸುಮಾರಿಗೆ ಜಿಮ್ ಮಾಡಲು ಬಂದ ಸ್ಥಳೀಯರು ಎಟಿಎಂ ಮಷಿನ್ ಕಳ್ಳತನವಾಗಿರುವುದನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ಓದಿ : ಸದ್ದು ಮಾಡಿದ ಖಾಕಿ ಪಿಸ್ತೂಲ್: ಬೆಂಗಳೂರಲ್ಲಿ ರೌಡಿಶೀಟರ್ ಕಾಲಿಗೆ‌ ಗುಂಡು

ಬ್ಯಾಂಕ್​ನ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಕಳುವಾದ ಎಟಿಎಂ ನಲ್ಲಿ 85 ಸಾವಿರ ರೂ. ಇರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 18, 2021, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.