ತುಮಕೂರು: ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಸರಗಳ್ಳರನ್ನು ಕೋಳಾಲ ಪೊಲೀಸರು ಬಂಧಿಸಿ, ಅವರಿಂದ 76 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಪಿ.ಗೊಲ್ಲಹಳ್ಳಿಯ ನವೀನಕುಮಾರ್, ಬೆಂಗಳೂರಿನ ಕುಂಬಳಗೋಡಿನ ವೆಂಕಟೇಶ, ಸಕಲೇಶಪುರ ತಾಲೂಕಿನ ಗುಳಗಳಲೆ ಗ್ರಾಮದ ಪುಟ್ಟರಾಜ ಬಂಧಿತ ಆರೋಪಿಗಳು.
ಮೇ 28ರಂದು ಕೋಳಾಲ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಈ ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಸುಲಿಗೆ ಪ್ರಕರಣ, ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ದೊರೆತಿದೆ.
ಕರ್ನಾಟಕದ ನರ್ಸಿಂಗ್ ಸಿಬ್ಬಂದಿಗೆ ಎಲ್ಲಿಲ್ಲದ ಬೇಡಿಕೆ : ಬ್ರಿಟನ್ ಆರೋಗ್ಯ ಇಲಾಖೆಗೂ ಬೇಕಂತೆ ನಮ್ಮ ನರ್ಸ್ಗಳು