ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಪ್ರತಿಭಟನೆ - Anganwadi Employees protest in Tumkuru news

ಗ್ಯಾಸ್, ಗೌರವ ಧನ ಪಾವತಿಸಬೇಕು. ಬಾಕಿ ಇರುವ ಅರಿಯರ್ಸ್, ಮರಣ ಪರಿಹಾರದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಖಾಯಂ ಮಾಡುವ ತನಕ ಕಾರ್ಯಕರ್ತರಿಗೆ 30,000 ರೂ. ಮತ್ತು ಸಹಾಯಕಿಯರಿಗೆ 21,000 ರೂ. ವೇತನ ಕೊಡಬೇಕು ಮತ್ತು ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ಪಾವತಿ ಮಾಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು..

ಅಂಗನವಾಡಿ ನೌಕರರ ಪ್ರತಿಭಟನೆ
ಅಂಗನವಾಡಿ ನೌಕರರ ಪ್ರತಿಭಟನೆ
author img

By

Published : Jul 13, 2020, 5:53 PM IST

ತುಮಕೂರು : ಅಂಗನವಾಡಿ ನೌಕರರಿಗೆ 25,000 ರೂ. ಪ್ರೋತ್ಸಾಹ ಧನ ಮತ್ತು ಸ್ಥಳೀಯ ಸಾರಿಗೆ ಬಸ್ ಪಾಸ್, ಊಟದ ವ್ಯವಸ್ಥೆಯನ್ನು ಸರ್ಕಾರ ಭರಿಸಬೇಕು. ಅಂಗನವಾಡಿ ನೌಕರರು ಕೊರೊನಾ ವಾರಿಯರ್ಸ್ ಆಗಿರುವುದರಿಂದ 50 ಲಕ್ಷ ವಿಮೆ ಕೊಡಬೇಕು. ಕೊರೊನಾ ಸೋಂಕಿತರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಸೋಂಕು ತಗುಲಿದ ಕಾರ್ಯಕರ್ತರ ಕುಟುಂಬಕ್ಕೆ ವಿಮೆ ವಿಸ್ತರಿಸಬೇಕು ಎಂದು ಜಿಲ್ಲಾ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಮಲಾ ಒತ್ತಾಯಿಸಿದರು.

ಅಂಗನವಾಡಿ ನೌಕರರ ಪ್ರತಿಭಟನೆ

ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಅಂಗನವಾಡಿ ಕಟ್ಟಡದ ಬಾಡಿಗೆಯನ್ನು ತಿಂಗಳಿಗೆ ಸರಿಯಾಗಿ ನೀಡಬೇಕು. ಗ್ಯಾಸ್, ಗೌರವ ಧನ ಪಾವತಿಸಬೇಕು. ಬಾಕಿ ಇರುವ ಅರಿಯರ್ಸ್, ಮರಣ ಪರಿಹಾರದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಖಾಯಂ ಮಾಡುವ ತನಕ ಕಾರ್ಯಕರ್ತರಿಗೆ 30,000 ರೂ. ಮತ್ತು ಸಹಾಯಕಿಯರಿಗೆ 21,000 ರೂ. ವೇತನ ಕೊಡಬೇಕು ಮತ್ತು ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ಪಾವತಿ ಮಾಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಮಲಾ, ಕಳೆದ ಮಾರ್ಚ್ ತಿಂಗಳಿನಿಂದ ಅಂಗನವಾಡಿ ನೌಕರರು ಫ್ರಂಟ್‌ಲೈನ್ ವಾರಿಯರ್ಸ್​ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈವರೆಗೂ ಸರ್ಕಾರ ಅವರಿಗೆ ಟಿಎ-ಡಿಎ ವ್ಯವಸ್ಥೆ ಮಾಡಿಲ್ಲ. ಅಲ್ಲದೇ ಸರ್ಕಾರದಿಂದ ನೀಡಲಾಗುತ್ತಿರುವ ಗೌರವ ಧನವು ನಿಗದಿತ ಸಮಯಕ್ಕೆ ದೊರೆಯುತ್ತಿಲ್ಲ. ಅನೇಕ ವರ್ಷಗಳಿಂದ ಅಂಗನವಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಖಾಯಂ ನೌಕರರನ್ನಾಗಿ ನೇಮಿಸಿಕೊಳ್ಳಬೇಕು. ಈ ಸಮಯದಲ್ಲಿ ನಮಗೆ ಉತ್ತಮವಾದ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.