ETV Bharat / state

ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಒದ್ದಾಡುತ್ತಿದ್ದ ಸೋಂಕಿತ ವೃದ್ದೆ.. ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ ಆ್ಯಂಬುಲೆನ್ಸ್​ ಚಾಲಕ - An ambulance driver saved infected women life

ಶಿರಾ ನಗರದ ಹೊರವಲಯದ ಬೂವನಹಳ್ಳಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ವೃದ್ಧೆಯೊಬ್ಬರು ವಾಂತಿ ಮಾಡಿಕೊಂಡು ಚಿಕಿತ್ಸೆಗೆ ಅಂಗಲಾಚುತ್ತಿದ್ದರು. ಈ ವೇಳೆ ಆ್ಯಂಬುಲೆನ್ಸ್​ ಚಾಲಕ ಯೋಗೇಶ್ ಎಂಬುವವರು ಸಹಾಯ ಮಾಡಿದ್ದಾರೆ.

an-ambulance-driver-saves-infected-women-lifes-in-tumkur
ಸೋಂಕಿತ ವೃದ್ದೆಯನ್ನು ಆಸ್ಪತ್ರೆಗೆ ಸಾಗಿಸಿದ ಆ್ಯಂಬುಲೆನ್ಸ್ ಚಾಲಕ
author img

By

Published : May 31, 2021, 9:37 PM IST

ತುಮಕೂರು: ಶಿರಾ ತಾಲೂಕಿನ ಕೊರೊನಾ ಆರೈಕೆ ಕೇಂದ್ರವೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೃದ್ದೆಯೊಬ್ಬರು ತೀವ್ರ ನಿತ್ರಾಣಗೊಂಡು ಒದ್ದಾಡುತ್ತಿದ್ದಾಗ ಅವರನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲದ ವೇಳೆ ಆ್ಯಂಬುಲೆನ್ಸ್​ ಚಾಲಕ ಯೋಗೇಶ್ ಎಂಬುವವರು ವೃದ್ಧೆಯನ್ನು ಕೈಗೆತ್ತಿಕೊಂಡು ವಾಹನದಲ್ಲಿ ಕೂರಿಸಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುವ ವಿಡಿಯೋ ವೈರಲ್ ಆಗಿದೆ.

ಸೋಂಕಿತ ವೃದ್ದೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ ಆ್ಯಂಬುಲೆನ್ಸ್​ ಚಾಲಕ

ಶಿರಾ ನಗರದ ಹೊರವಲಯದ ಬೂವನಹಳ್ಳಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ವೃದ್ಧೆಯೊಬ್ಬರು ವಾಂತಿ ಮಾಡಿಕೊಂಡು ಚಿಕಿತ್ಸೆಗೆ ಅಂಗಲಾಚುತ್ತಿದ್ದರು. ಈ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಾ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕಿತ್ತು.

ದುರದೃಷ್ಟವಶಾತ್​ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾವುದೇ ವ್ಯವಸ್ಥೆ ಇರಲಿಲ್ಲ. ಇದನ್ನು ಗಮನಿಸಿದ ಆ್ಯಂಬುಲೆನ್ಸ್ ಚಾಲಕ ಸ್ವತಃ ವೃದ್ದೆಯನ್ನು ಎತ್ತಿಕೊಂಡು ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಸಹ ಈ ಸಂದರ್ಭದಲ್ಲಿ ಅಜ್ಜಿಯ ಸಹಾಯಕ್ಕೆ ಬಾರದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಕೋವಿಡ್ ಆರೈಕೆ ಕೇಂದ್ರದಲ್ಲಿ ಕನಿಷ್ಠ ತಳ್ಳುಗಾಡಿಯ ವ್ಯವಸ್ಥೆ ಇಲ್ಲದಿರುವುದು ತಿಳಿದು ಬಂದಿದೆ.

ಓದಿ: ಮಂಡ್ಯ: ರಾತ್ರೋರಾತ್ರಿ ಜಿಲ್ಲಾ ಆರೋಗ್ಯಾಧಿಕಾರಿ ವರ್ಗಾವಣೆಗೆ ಆದೇಶ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.