ತುಮಕೂರು: ವಿಧಾನ ಪರಿಷತ್ನಲ್ಲಿ ನಿನ್ನೆ ನಡೆದ ಘಟನಾವಳಿಯನ್ನು ನಾನು ವಿರೋಧಿಸುತ್ತೇನೆ ಹಾಗೂ ವಿಷಾದಿಸುತ್ತೇನೆ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಹೇಳಿದ್ದಾರೆ.
ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ವಿದ್ಯಾವಂತರ ವೇದಿಕೆ ಆಗಿರುವಂತಹ ವಿಧಾನ ಪರಿಷತ್ನಲ್ಲಿ ಇಂತಹ ಘಟನೆ ಆಗಬಾರದಿತ್ತು ಎಂದರು.
ಭವಿಷ್ಯದಲ್ಲಿ ಇಂತಹ ಘಟನಾವಳಿಗಳು ಮರುಕಳಿಸದಂತೆ ವಿಧಾನ ಪರಿಷತ್ನಲ್ಲಿರುವ ಸದಸ್ಯರು ಚಿಂತನೆ ನಡೆಸಬೇಕಿದೆ. ವಿಧಾನ ಪರಿಷತ್ ಸಭಾಪತಿ ಅವಿಶ್ವಾಸ ನಿರ್ಣಯದ ಪರವಾಗಿ ಜೆಡಿಎಸ್ ಇದೆ. ಕಾನೂನು ಪ್ರಕಾರವೇ ಎಲ್ಲಾ ಪ್ರಕ್ರಿಯೆಗಳು ನಡೆದಿದ್ದವು. ಆದರೆ ನಡೆದ ಘಟನೆಗಳ ಬಗ್ಗೆ ವಿಷಾದಿಸುತ್ತೇನೆ ಎಂದು ಹೇಳಿದರು.
ಓದಿ...ಮೊದಲ ಹಂತದ ಗ್ರಾ.ಪಂ. ಚುನಾವಣೆ: 156 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ