ETV Bharat / state

ಬಂಡೆ ಸ್ಫೋಟ ಶಬ್ದಕ್ಕೆ ಮಗು ಸಾವು ಆರೋಪ.. ಶವ ಸಂಸ್ಕಾರಕ್ಕೆ ಜಾಗ ಇಲ್ಲದ್ದಕ್ಕೆ ಎರಡೆರಡು ಬಾರಿ ಅಂತ್ಯಕ್ರಿಯೆ! - ಬಂಡೆ ಸ್ಫೋಟ

ಕೈಮರ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಬಂಡೆಗಳನ್ನು ಸಿಡಿಸಲಾಗುತ್ತಿದೆ. ಮನೆಯಲ್ಲಿದ್ದ ಹಸುಗೂಸು ಈ ವೇಳೆ ಬೆಚ್ಚಿಬಿದ್ದಿದೆ. ಅನಾರೋಗ್ಯಕ್ಕೆ ಒಳಗಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತ್ತು ಎಂಬುದು ಪೋಷಕರ ಆರೋಪವಾಗಿದೆ.

allegation-of-new-born-baby-died-from-rock-explosion-in-tumkur
ಬಂಡೆ ಸ್ಫೋಟ ಶದ್ದಕ್ಕೆ ಹಸುಗೂಸು ಸಾವು ಆರೋಪ
author img

By

Published : Mar 22, 2021, 6:19 PM IST

ತುಮಕೂರು: ಬಂಡೆ ಸಿಡಿತದ ಶಬ್ದಕ್ಕೆ ಬೆಚ್ಚಿಬಿದ್ದು, ಮೃತಪಟ್ಟಿದ್ದ 3 ತಿಂಗಳ ಹಸುಗೂಸಿನ ಶವ ಸಂಸ್ಕಾರ ಮಾಡಲು ಅವಕಾಶ ನೀಡದೆ ಗಾರ್ಮೆಂಟ್ಸ್​​ ಕಾರ್ಮಿಕನೊಬ್ಬ ಅಮಾನವೀಯವಾಗಿ ನಡೆದುಕೊಂಡಿರುವ ಆರೋಪ ಪ್ರಕರಣ ಜಿಲ್ಲೆ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಕ್ರಾಸ್ ಬಳಿ ನಡೆದಿದೆ.

ಕೈಮರ ಗ್ರಾಮದ ರಂಗನಾಥ್ ಮತ್ತು ನೇತ್ರಾ ದಂಪತಿಯ 3 ತಿಂಗಳ ಹಸುಗೂಸು ಶನಿವಾರ ರಾತ್ರಿ ಮೃತಪಟ್ಟಿತ್ತು. ಶವವನ್ನು ಜಂಪೇನಹಳ್ಳೀ ಕ್ರಾಸ್ ಬಳಿ ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದರು. ಸಮೀಪದ ಗಾರ್ಮೆಂಟ್ಸ್​​ ಕಂಪನಿಯ ಕಾವಲುಗಾರ ಸ್ಥಳಕ್ಕೆ ಬಂದು ಅಂತ್ಯಸಂಸ್ಕಾರ ಮಾಡದಂತೆ ತಡೆದಿದ್ದಾನೆ.

ಬಂಡೆ ಸ್ಫೋಟ ಶಬ್ದಕ್ಕೆ ಹಸುಗೂಸು ಸಾವು ಆರೋಪ

ಇದು ಕಂಪನಿಗೆ ಸೇರಿದ ಜಾಗ ಎಂದು ಗಲಾಟೆ ಮಾಡಿದ್ದಾನೆ. ಬಳಿಕ ಮಗುವನ್ನು ಗುಂಡಿಯಿಂದ ಹೊರತೆಗೆದು ಮತ್ತೆ ರಾಜಕಾಲುವೆಯ ಬಳಿ ಗುಂಡಿ ತೆಗೆದು ಸಂಸ್ಕಾರ ಮಾಡಿದ್ದಾರೆ.

ಕೈಮರ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಬಂಡೆಗಳನ್ನು ಸಿಡಿಸಲಾಗುತ್ತಿದೆ. ಬಂಡೆ ಸಿಡಿತದ ಭಾರಿ ಶಬ್ದದಿಂದ ಮನೆಯಲ್ಲಿದ್ದ ಹಸುಗೂಸು ಬೆಚ್ಚಿಬಿದ್ದಿದೆ. ಉಸಿರಾಟದ ಸಮಸ್ಯೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂಬುದು ಪೋಷಕರ ಆರೋಪವಾಗಿದೆ.

ವಿಷಯ ತಿಳಿದ ತಕ್ಷಣ ತಹಶೀಲ್ದಾರ್ ಸೇರಿದಂತೆ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪನಿಯಿಂದ ಸ್ಮಶಾನ ಜಾಗ ಒತ್ತುವರಿ ಆರೋಪ

ಕೈಮರ ಗ್ರಾಮಕ್ಕೆ ಸ್ಮಶಾನ ಜಾಗವಾಗಿ ಮೀಸಲಿಡಲಾಗಿದೆ. ಆದ್ರೆ ಅದರ ಪಕ್ಕದಲ್ಲೇ ಗಾರ್ಮೆಂಟ್ಸ್​​ ಇರುವುದರಿಂದ, ಬಹುತೇಕ ಜಾಗವೆಲ್ಲ ತಮ್ಮದೆಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಜೊತೆಗೆ ಸ್ಮಶಾನ ಸರ್ಕಾರಿ ಜಮೀನಿನಲ್ಲಿದ್ದು, ಆ ಜಾಗವನ್ನೂ ಕಂಪನಿ ತನ್ನದೆನ್ನುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಇದನ್ನೂ ಓದಿ: ಭೂವಿವಾದ: ಮೈದುನನಿಂದಲೇ ಮಾಜಿ ವಾರ್ಡ್​ ಸದಸ್ಯೆಯ ಬರ್ಬರ ಹತ್ಯೆ - ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.