ETV Bharat / state

ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಅನ್ನೋದು ನಮ್ಮ ಆಸೆ: ಸಚಿವ ಕೆ.ಎನ್ ರಾಜಣ್ಣ - ಸಿಎಂ ರೇಸ್​​

ಸಿಎಂ ರೇಸ್​​ಗೆ ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನ ಸಹಕಾರ ಸಚಿವ ಕೆ.ಎನ್ ರಾಜಣ್ಣ ಎಳೆದು ತಂದಿದ್ದಾರೆ. ನನಗೆ ಮುಖ್ಯಮಂತ್ರಿ ಆಗೋ ಅಭಿಲಾಷೆ ಇಲ್ಲ. ಆದರೆ, ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ದೊರಕಬೇಕು ಅನ್ನೋದು ನಮ್ಮೆಲ್ಲರ ಅಭಿಲಾಷೆ ಎಂದಿದ್ದಾರೆ.

Minister KN Rajanna
ಸಚಿವ ಕೆ.ಎನ್ ರಾಜಣ್ಣ
author img

By

Published : Jun 26, 2023, 9:02 AM IST

Updated : Jun 26, 2023, 11:14 AM IST

ವಾಲ್ಮೀಕಿ ಸಮುದಾಯದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ

ತುಮಕೂರು: ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆಯೆ?, ಅಥವಾ ದ್ವಿತೀಯಾರ್ಧದಲ್ಲಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಗದ್ದುಗೆ ಹಿಡಿಯುತ್ತಾರೆಯೇ ಎಂಬ ಪ್ರಶ್ನೆಗಳ ನಡುವೆ ಕಾಂಗ್ರೆಸ್​ನಲ್ಲಿ ಮತ್ತೆ ಸಿಎಂ ಗಾದಿ ಫೈಟ್ ಮುನ್ನೆಲೆಗೆ ಬಂದಿದೆ. ನನಗೆ ಮುಖ್ಯಮಂತ್ರಿಯಾಗುವ ಅಭಿಲಾಷೆ ಇಲ್ಲ. ಆದರೆ, ನಮ್ಮ ಸಮಾಜದಿಂದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಅನ್ನೋದು ನಮ್ಮ ಆಸೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ವಾಲ್ಮೀಕಿ ಸಮುದಾಯದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ನಾಯಕ ಸಮುದಾಯದವರು ಕೆಲವರು ಬಂದಿಲ್ಲ ಎಂದರೆ ಅವರು ನಮ್ಮ ಸಮಾಜದ ಪರವಾಗಿಲ್ಲ ಅಂತಲ್ಲ. ಅವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇದ್ದಾರೆ ಎಂದರು.

ಪೂಜ್ಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಸಮುದಾಯದ ಬೇಡಿಕೆಗಳನ್ನು ತಿಳಿಸಿದ್ದಾರೆ. ಆ ಅನಿಸಿಕೆಗಳನ್ನ ಈಡೇರಿಸುವ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡುವ ಭರವಸೆಯಿದೆ. 2008ರ ವಿಧೇಯಕದಿಂದ ಹೆಚ್ಚಿನ ಶಾಸಕರು ಆಯ್ಕೆಯಾಗಲು ಸಾಧ್ಯವಾಗಿದೆ ಎಂದರು.

ಇದನ್ನೂ ಓದಿ: 'ಎಐಸಿಸಿ ಅಧ್ಯಕ್ಷ ಸ್ಥಾನದ ಕಗ್ಗಂಟು ಬಗೆಹರಿಸದವರು ಸಿದ್ದು-ಡಿಕೆಶಿ ನಡುವಿನ ಸಿಎಂ ಗಾದಿ ಕಾದಾಟ ಪರಿಹರಿಸ್ತಾರಾ?'

1998ರಲ್ಲಿ ನಾನು ಒಳ್ಳೆ ರೀತಿಯಲ್ಲೋ, ಕೆಟ್ಟ ರೀತಿಯಲ್ಲೋ ವಿಧಾನ ಪರಿಷತ್ ಸದಸ್ಯನಾದೆ. ನಮ್ಮ ಜಿಲ್ಲೆಯಲ್ಲಿರುವ ಅಸಹಾಯಕ ಸಮುದಾಯಗಳು ನನಗೆ ಈ ಸ್ಥಾನಮಾನ ನೀಡಿದ್ದಾರೆ. ಎಲ್ಲ ಜಾತಿಯವರು ನನಗೆ ಶೇ. 80 ರಿಂದ 90 ರಷ್ಟು ಮತ ನನಗೆ ನೀಡಿ ನನ್ನನ್ನ ಗೆಲ್ಲಿಸಿದ್ದಾರೆ ಎಂದರು. ನಮ್ಮದೇ ಕಾಂಗ್ರೆಸ್ ಮುಖ್ಯಮಂತ್ರಿಯೊಬ್ಬರು ಒಂದೇ ಒಂದು ಮಂತ್ರಿ ಸ್ಥಾನವನ್ನು ನಮ್ಮ ಸಮುದಾಯದವರಿಗೆ ಕೊಟ್ಟಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಮೂರು ಜನ ಎಸ್​​ಟಿ ಸಮುದಾಯದವರಿಗೆ ಮಂತ್ರಿ ಸ್ಥಾನ ಕೊಟ್ಟದ್ದಾರೆ. ಆದು ಸಿದ್ದರಾಮಯ್ಯ ನಮ್ಮ ಸಮಾಜಕ್ಕೆ ಕೊಟ್ಟಿರುವ ಗೌರವ ಎಂದರು.

ಮುಂದಿನ ದಿನಗಳಲ್ಲಿ ಅಹಿಂದ ಸಮುದಾಯದವರು ಎಲ್ಲ ಒಟ್ಟಾದಾಗ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗಲು ಸಾಧ್ಯ. ನಮ್ಮ ಜಿಲ್ಲೆಯಲ್ಲಿ ಬಲಾಢ್ಯರು ಹೆಚ್ಚಿದ್ದಾರೆ. ಮೊದಲೆಲ್ಲ ನಮ್ಮ ಸಮುದಾಯದಲ್ಲಿ ಒಬ್ಬರೋ, ಇಬ್ಬರದ್ದು ಕಾರು ಇರುತ್ತಿದ್ದವು. ಈಗ ಇಲ್ಲಿ ನೋಡಿದರೆ ಜನಗಳಿಗಿಂತ ಜಾಸ್ತಿ ಕಾರುಗಳಿವೆ ಎಂದರು.

ಸಿದ್ದರಾಮಯ್ಯ ಪರ ಸತೀಶ್ ಜಾರಕಿಹೊಳಿ ಬ್ಯಾಟಿಂಗ್​: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಅರ್ಧಕ್ಕೆ ಅಂತ ಯಾರು ಹೇಳಿಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ. ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇತ್ತೀಚೆಗೆ ಸಿದ್ದರಾಮಯ್ಯ ಪರ ಬ್ಯಾಟಿಂಗ್​ ಮಾಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಅರ್ಧ ಅವಧಿಗೆ ಸಿಎಂ ಅಂತಾ ಯಾರೂ ಹೇಳಿಲ್ಲ, ಐದು ವರ್ಷ ಅವರೇ ಮುಂದುವರೆಯುತ್ತಾರೆ: ಸಚಿವ ಸತೀಶ್ ಜಾರಕಿಹೊಳಿ

Last Updated : Jun 26, 2023, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.