ETV Bharat / state

ಅಂಧ ಗಾಯಕಿಯರಿಗೆ ಇಂದು ಮನೆ ಹಸ್ತಾಂತರ: ಕೊಟ್ಟ ಮಾತು ಉಳಿಸಿಕೊಂಡ ನಟ ಜಗ್ಗೇಶ್​​​ - Home transfers to blind singers

ಖ್ಯಾತ ರಿಯಾಲಿಟಿ ಶೋ ಸರಿಗಮಪ-17ರಲ್ಲಿ ಅಂಧ ಗಾಯಕಿಯರಾದ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರು ತಮ್ಮ ಧ್ವನಿ ಮೂಲಕ ಪ್ರೇಕ್ಷಕರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು. ಕಷ್ಟದಲ್ಲಿರುವ ಈ ಗಾಯಕಿಯರ ನೆರವಿಗೆ ಜಗ್ಗೇಶ್ ಮುಂದಾಗಿದ್ದು, ಸ್ವಂತ ಸೂರು ನಿರ್ಮಿಸಿಕೊಟ್ಟಿದ್ದಾರೆ.

Actor Jaggesh Home transfers to blind singers
ಅಂಧ ಗಾಯಕಿಯರಿಗೆ ನಿರ್ಮಿಸಲಾದ ಮನೆ
author img

By

Published : Mar 12, 2020, 12:59 PM IST

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿಯಲ್ಲಿ ಅಂಧ ಗಾಯಕಿಯರಿಗೆ ನಿರ್ಮಿಸಲಾದ ಮನೆಯನ್ನು ನಟ ಜಗ್ಗೇಶ್ ಇಂದು ಹಸ್ತಾಂತರಿಸಲಿದ್ದಾರೆ.

ಅಂಧ ಗಾಯಕಿಯರಿಗೆ ಮನೆ ಹಸ್ತಾಂತರ: ಕೊಟ್ಟ ಮಾತು ಉಳಿಸಿಕೊಂಡ ನಟ ಜಗ್ಗೇಶ್

ಮಧುಗಿರಿ ಪಟ್ಟಣದ ದಂಡಿನಮಾರಮ್ಮ ದೇಗುಲದ ಬಳಿ ಮೂವರು ಅಂಧ ಗಾಯಕಿಯರು ಭಿಕ್ಷೆ ಬೇಡುತ್ತಾ ಬದುಕು ಸಾಗಿಸುತ್ತಿದ್ದರು. ಜೀ ಕನ್ನಡ ವಾಹಿನಿ ಇವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ಅಂಧ ಗಾಯಕಿಯರಾದ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರು ತಮ್ಮ ಧ್ವನಿ ಮೂಲಕ ಪ್ರೇಕ್ಷಕರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು. ಕಷ್ಟದಲ್ಲಿರುವ ಈ ಗಾಯಕಿಯರ ನೆರವಿಗೆ ಜಗ್ಗೇಶ್ ಮುಂದಾಗಿದ್ದು, ಸ್ವಂತ ಸೂರು ನಿರ್ಮಿಸಿಕೊಟ್ಟಿದ್ದಾರೆ.

ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿಯಲ್ಲಿ ಮನೆ ನಿರ್ಮಿಸಲಾಗಿದ್ದು, ಇಂದು ಅವರ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಲಿದ್ದಾರೆ. ಮನೆಗೆ ಜಗ್ಗೇಶ್ ಪರಿಮಳ ನಿಲಯ ಎಂದು ಹೆಸರಿಡಲಾಗಿದೆ. ಜಗ್ಗೇಶ್ ಅಭಿಮಾನಿಗಳ ಸಂಘ, ಫ್ರೆಂಡ್ಸ್ ಗ್ರೂಪ್, ಕೊರಟಗೆರೆ ವತಿಯಿಂದ ಕೊಡುಗೆ ಎಂದು ಸಹ ಬರೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.