ತುಮಕೂರು: ಅನುದಾನ ದುರ್ಬಳಕೆ ಕುರಿತು ದೂರನ್ನು ವಾಪಸ್ ಪಡೆಯುವಂತೆ ಲಂಚ ನೀಡುತ್ತಿದ್ದ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯ ಪಿಡಿಒ ಮಂಜಮ್ಮ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸಿ.ಡಿ.ಪ್ರಭಾಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಾಮಾಜಿಕ ಕಾರ್ಯಕರ್ತ ನಾಗರಾಜು ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಇಒ ತನಿಖೆಗೆ ಆದೇಶಿಸಿದ್ದರು. ದೂರು ಹಿಂಪಡೆಯುವಂತೆ ಸಾಮಾಜಿಕ ಕಾರ್ಯಕರ್ತ ಜಟ್ಟಿ ಅಗ್ರಹಾರ ನಾಗರಾಜುಗೆ 25,000 ಹಣದ ಆಮಿಷವೊಡ್ಡಿದ್ದರು. ಈ ಬಗ್ಗೆ ನಾಗರಾಜು, ಎಇಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಪಿಡಿಒ ಮಂಜಮ್ಮ ಹಾಗೂ ಸಿ.ಡಿ.ಪ್ರಭಾಕರ್ ಅವರನ್ನು ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ ಸಿಬ್ಬಂದಿ ಖೆಡ್ಡಾಗೆ ಬೀಳಿಸಿದ್ದಾರೆ.
ಇದನ್ನೂ ಓದಿ:ಮೊಬೈಲ್ ಫೋನ್ಗಾಗಿ ರಸ್ತೆ ಮೇಲೆ ಬಿದ್ದು, ಪ್ರಾಣ ಕಳೆದುಕೊಂಡ ಯುವತಿ!