ತುಮಕೂರು : ಈಜು ಕಲಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದೆ.
ತಾಲೂಕಿನ ಎಂ.ಬೇವಿನಹಳ್ಳಿ ನಿವಾಸಿ ಯೋಗಾನಂದ (45) ಎಂಬುವರು ಮೃತ ದುರ್ದೈವಿ. ತಾಲೂಕಿನ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಗೆ ಈಜು ಕಲಿಯಲು ಪಟ್ಟಣದವರು ಸೇರಿದಂತೆ ಅಕ್ಕ-ಪಕ್ಕದ ಹಳ್ಳಿಯವರು ತೆರಳಿದ್ದರು. ಮಹಿಳೆಯರು, ಮಕ್ಕಳು ಕಲಿಯಲು ಟ್ಯೂಬ್‌ಗಳ ಸಮೇತ ಮುಂಜಾನೆಯೇ ತೆರಳಿ ಸ್ಥಳೀಯ ಈಜುಪಟು ದಂಡಿನಶಿವರ ತಿಮ್ಮೇಗೌಡ ಮಾರ್ಗದರ್ಶನದಲ್ಲಿ ಈಜು ಕಲಿಯುತ್ತಿದ್ದರು.
ಆದರೆ, ಎರಡು ದಿನಗಳಿಂದ ದಂಡಿನಶಿವರ ತಿಮ್ಮೇಗೌಡ ಅನಾರೋಗ್ಯ ನಿಮಿತ್ತ ನಾನು ಬರುವುದಿಲ್ಲ ಎಂದು ತಿಳಿಸಿದ್ದರೂ ಸಾರಿಗೆಹಳ್ಳಿ ಕೆರೆಗೆ ಇಂದು ಎಂದಿನಂತೆ ಕುಟುಂಬ ಸಮೇತ ಈಜು ಕಲಿಯಲು ಹೆಂಡತಿ ಆಶಾ ಹಾಗೂ ಮೂರು ವರ್ಷದ ಮಗುವಿನೊಂದಿಗೆ ಯೋಗಾನಂದ್ ಬಂದಿದ್ದರು.
ಟ್ಯೂಬ್ನೊಂದಿಗೆ ಈಜಲು ಪ್ರಾರಂಭಿಸಿದನಾದರೂ ಮೇಲಿನಿಂದ ನೀರಿನಲ್ಲಿ ಬಿದ್ದಾಗ ಟ್ಯೂಬ್ ದೇಹದಿಂದ ಹೊರ ಬಂದು ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಇದ್ದ ಹೆಂಡತಿ ಸ್ಥಳೀಯರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಲೈನ್ಮ್ಯಾನ್