ತುಮಕೂರು: ಕಾಯಿ ಕೀಳಲು ತೆಂಗಿನ ಮರವೇರಿದ್ದ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ತಿಪಟೂರು ನಗರದ ಕೆರೆ ಏರಿ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಡೇನೂರು ಬೋವಿ ಕಾಲೋನಿಯ ಯಲ್ಲಪ್ಪ (45) ಎಂದು ಗುರುತಿಸಲಾಗಿದೆ. ತೆಂಗಿನ ತೋಟವು ಗಣೇಶ ಎಂಬುವವರಿಗೆ ಸೇರಿದ್ದಾಗಿದ್ದು, ಅನೇಕ ದಿನಗಳಿಂದ ಮೃತ ಯಲ್ಲಪ್ಪ ತೋಟದಲ್ಲಿ ಕೆಲಸ ಮಾಡುತ್ತಿದ್ದನು.
ಗಣೇಶ್, ಯಲ್ಲಪ್ಪ ನನ್ನು ಕರೆದುಕೊಂಡು ಬಂದು ಕಾಯಿ ಕೀಳಿಸಲು ಮರ ಹತ್ತಿಸಿದ್ದನು. ಯಲ್ಲಪ್ಪ ಆಯತಪ್ಪಿ ಕೆಳಗಡೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.