ತುಮಕೂರು: ಕನ್ನಡ ಪರ ಸಂಘಟನೆ ಕಾರ್ಯಕರ್ತರೆಂದು ಹೇಳಿಕೊಂಡ ಪುಂಡರು, ನಗರದ ಹೊರವಲಯದ ಜಾಸ್ ಟೋಲ್ ಬಳಿಯ ಆನಂದ ಬಿಹಾರಿ ಹೋಟೆಲ್ಗೆ ನುಗ್ಗಿ ದಾಂಧಲೆ ನಡೆಸಿ, ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ್ದಾರೆ.
ಶಿವಕುಮಾರ, ರಂಗಸ್ವಾಮಿ, ರಾಜೇಶ್ ಹಾಗೂ ದಕ್ಷಿತ್ ಗೌಡ ಎಂಬುವರು ಹೋಟೆಲ್ಗೆ ಊಟಕ್ಕೆಂದು ಹೋಗಿದ್ದಾರೆ. ಊಟ ಆದ ಬಳಿಕ ಹಿಂದಿನ ಬಾಕಿ ಹಣವನ್ನು ಕೇಳಿದ್ದಕ್ಕೆ ಕೋಪಗೊಂಡ ನಾಲ್ವರೂ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿ, ಚೇರ್ಗಳನ್ನು ಎತ್ತಿಹಾಕಿ ದಾಂಧಲೆ ನಡೆಸಿದ್ದಾರೆ. ಇವರ ಗೂಂಡಾ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ನಾಲ್ವರೂ ಆರೋಪಿಗಳನ್ನ ಕ್ಯಾತಸಂದ್ರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.