ETV Bharat / state

'ಮೊದಲು ಚಿಕಿತ್ಸೆ ನೀಡಿ ಆನಂತರ ಹಣ' ಕಿರಿಯ ವೈದ್ಯರಿಗೆ ಡಾ. ಸಿ.ಎನ್ ಮಂಜುನಾಥ್ ಸಲಹೆ - ತುಮಕೂರು

ಮೊದಲು ಚಿಕಿತ್ಸೆ ನೀಡಿ ಆ ನಂತರ ಹಣ ಎಂಬ ಮನೋಭಾವವನ್ನು ಪ್ರತಿಯೊಬ್ಬ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಯದೇವ ಹೃದ್ರೋಗ ಚಿಕಿತ್ಸಾ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.

ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಸಂಸ್ಥೆಯ 8ನೇ ಘಟಿಕೋತ್ಸವ
author img

By

Published : Sep 14, 2019, 10:31 PM IST

ತುಮಕೂರು: ವೈದ್ಯರಾದವರಲ್ಲಿ ಮೊದಲು ತಾಳ್ಮೆಯ ಮನೋಭಾವವಿರಬೇಕು, ರೋಗಿಗಳನ್ನು ಸ್ಪರ್ಶಿಸುವ ಮೂಲಕ ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಚಿಕಿತ್ಸೆ ನೀಡಿ ಎಂದು ಜಯದೇವ ಹೃದ್ರೋಗ ಚಿಕಿತ್ಸಾ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಕಿರಿಯ ವೈದ್ಯರಿಗೆ ಕಿವಿಮಾತು ಹೇಳಿದ್ದಾರೆ.

ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಸಂಸ್ಥೆಯ 8ನೇ ಘಟಿಕೋತ್ಸವ

ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಸಂಸ್ಥೆಯ 8ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ರೋಗಗಳನ್ನು ಯಾರು ಗುಣಪಡಿಸುತ್ತಾರೋ ಅವರೆಲ್ಲರೂ ವೈದ್ಯರಂತೆ. ಉನ್ನತ ಶಿಕ್ಷಣ, ಮಾನವೀಯ ಗುಣ, ಉತ್ತಮ ಸಂಸ್ಕೃತಿ, ಸೂಕ್ಷ್ಮ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ ಎಂದರು.

ವೈದ್ಯರಾದವರಿಗೆ ತಾಳ್ಮೆ ಇರಬೇಕು, ರೋಗಿಗಳು ತಮಗೆ ಯಾವ ಸಮಸ್ಯೆ ಇದೆ ಎಂಬುದನ್ನು ಹೇಳಿಕೊಳ್ಳಲು ಅನುವು ಮಾಡಿಕೊಡಬೇಕು. ವೈದ್ಯರು ಮೊದಲು ರೋಗಿಗಳನ್ನು ಸ್ಪರ್ಶಿಸಿ ಅವರ ಜೊತೆ ನಗುಮೊಗದಿಂದ ಮಾತನಾಡಿದರೆ ರೋಗಿಗಳಿಗೆ ಅದೇ ಮೊದಲ ಔಷಧಿ ಇದ್ದಂತೆ. ಮೊದಲು ಚಿಕಿತ್ಸೆ ನೀಡಿ ನಂತರ ಹಣ ಎಂಬ ಮನೋಭಾವವನ್ನು ಪ್ರತಿಯೊಬ್ಬರು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿರಿಯ ವೈದ್ಯರಿಗೆ ಸಲಹೆ ನೀಡಿದರು.

ಸಂಸ್ಥೆಯ ಕುಲಪತಿ ಡಾಕ್ಟರ್ ಜಿ ಪರಮೇಶ್ವರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಮ್ಮ ಮಗಳು ಅಪೇಕ್ಷಾ ಎಂ.ಬಿ.ಬಿ.ಎಸ್ ನಲ್ಲಿ ಪದವಿ ಸ್ವೀಕರಿಸುವುದನ್ನು ಕಾಣಲು ಪೋಷಕರಂತೆ ಸಾಮಾನ್ಯರ ಸ್ಥಳದಲ್ಲಿ ಕುಳಿತಿದ್ದು ವಿಶೇಷವಾಗಿತ್ತು.

Intro:ತುಮಕೂರು: ವೈದ್ಯರಾದವರಲ್ಲಿ ಮೊದಲು ತಾಳ್ಮೆಯ ಮನೋಭಾವವಿರಬೇಕು, ರೋಗಿಗಳನ್ನು ಸ್ಪರ್ಶಿಸುವ ಮೂಲಕ ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಚಿಕಿತ್ಸೆ ನೀಡಿ ಎಂದು ಜಯದೇವ ಹೃದ್ರೋಗ ಚಿಕಿತ್ಸಾ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಕಿರಿಯ ವೈದ್ಯರಿಗೆ ಕಿವಿಮಾತನ್ನು ಹೇಳಿದರು.

Body:ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಸಂಸ್ಥೆಯ 8ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾಜದಲ್ಲಿರುವ ರೋಗಗಳನ್ನು ಯಾರು ಗುಣಪಡಿಸುತ್ತಾರೋ ಅವರೆಲ್ಲರೂ ವೈದ್ಯರಂತೆ, ಉನ್ನತ ಶಿಕ್ಷಣ ಮಾನವೀಯ ಗುಣ, ಉತ್ತಮ ಸಂಸ್ಕೃತಿ, ಸೂಕ್ಷ್ಮ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ. ವೈದ್ಯರಾದವರಿಗೆ ತಾಳ್ಮೆ ಇರಬೇಕು, ರೋಗಿಗಳು ತಮಗೆ ಯಾವ ಸಮಸ್ಯೆ ಇದೆ ಎಂಬುದನ್ನು ಹೇಳಿಕೊಳ್ಳಲು ಅನುವು ಮಾಡಿಕೊಡಬೇಕು, ವೈದ್ಯರು ಮೊದಲು ರೋಗಿಗಳನ್ನು ಸ್ಪರ್ಶಿಸಿ ಅವರ ಜೊತೆ ನಗುಮೊಗದಿಂದ ಮಾತನಾಡಿದರೆ ರೋಗಿಗಳಿಗೆ ಅದೇ ಮೊದಲ ಔಷಧಿ ಇದ್ದಂತೆ, ಮೊದಲು ಚಿಕಿತ್ಸೆ ನೀಡಿ ಆನಂತರ ಹಣ ಎಂಬ ಮನೋಭಾವವನ್ನು ಪ್ರತಿಯೊಬ್ಬರು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿರಿಯ ವೈದ್ಯರಿಗೆ ಸಲಹೆ ನೀಡಿದರು.
ಬೈಟ್: ಡಾ. ಸಿ.ಎನ್ ಮಂಜುನಾಥ್, ಜಯದೇವ ಹೃದ್ರೋಗ ಚಿಕಿತ್ಸಾ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ.

Conclusion:ಸಂಸ್ಥೆಯ ಕುಲಪತಿ ಡಾಕ್ಟರ್ ಜಿ ಪರಮೇಶ್ವರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅವರು ತಮ್ಮ ಮಗಳು ಅಪೇಕ್ಷಾ ಎಂ.ಬಿ.ಬಿ.ಎಸ್ ನಲ್ಲಿ ಪದವಿ ಸ್ವೀಕರಿಸುವುದನ್ನು ಕಾಣಲು ಪೋಷಕರಂತೆ ಸಾಮಾನ್ಯ ಸ್ಥಳದಲ್ಲಿ ಕುಳಿತಿದ್ದು ವಿಶೇಷವಾಗಿತ್ತು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.