ತುಮಕೂರು : ತುಮಕೂರು ಜಿಲ್ಲೆಯಲ್ಲಿ ಇಂದದು 233 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 9606ಕ್ಕೇರಿಕೆಯಾಗಿದೆ.
ತುಮಕೂರು ತಾಲ್ಲೂಕಿನಲ್ಲಿ ಇಂದು 73 ಮಂದಿಗೆ ಸೋಂಕು ತಗುಲಿದೆ, ತಿಪಟೂರು ತಾಲೂಕಿನಲ್ಲಿ 38 , ಪಾವಗಡ ತಾಲೂಕಿನಲ್ಲಿ 22, ಕೊರಟಗೆರೆ ತಾಲೂಕಿನಲ್ಲಿ 19, ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲೂಕಿನಲ್ಲಿ ತಲಾ 16, ಶಿರಾ ತಾಲೂಕಿನಲ್ಲಿ 14, ತುರುವೇಕೆರೆ ತಾಲೂಕಿನಲ್ಲಿ 15, ಮಧುಗಿರಿ ತಾಲ್ಲೂಕಿನಲ್ಲಿ 12 ಮತ್ತು ಕುಣಿಗಲ್ ತಾಲೂಕಿನಲ್ಲಿ 8 ಮಂದಿಗೆ ಸೋಂಕು ತಗುಲಿದೆ.
ಇಂದು ಓರ್ವ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಇದರಿಂದ ಮೃತರ ಸಂಖ್ಯೆ 202ಕ್ಕೆ ಏರಿಕೆಯಾಗಿದೆ.