ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 217 ಮಂದಿಗೆ ಇಂದು ಕೊರೊನಾ ಸೋಂಕು ತಗುಲಿದ್ದು, ಇದುವರೆಗೂ 17,604 ಮಂದಿಗೆ ಸೋಂಕು ಹರಡಿದಂತಾಗಿದೆ.
ತುಮಕೂರು ತಾಲ್ಲೂಕಿನಲ್ಲಿ 96 ಮಂದಿಗೆ, ತಿಪಟೂರು ತಾಲ್ಲೂಕಿನಲ್ಲಿ 27, ಶಿರಾ ತಾಲೂಕಿನಲ್ಲಿ 26, ಗುಬ್ಬಿ ತಾಲ್ಲೂಕಿನಲ್ಲಿ 21, ಚಿಕ್ಕನಾಯಕನಹಳ್ಳಿ ಮತ್ತು ಪಾವಗಡ ತಾಲೂಕಿನಲ್ಲಿ ತಲಾ 10, ಕುಣಿಗಲ್ ತಾಲೂಕಿನಲ್ಲಿ 9, ಕೊರಟಗೆರೆ ಮತ್ತು ತುರುವೇಕೆರೆ ತಾಲೂಕಿನಲ್ಲಿ ತಲಾ ಐವರಿಗೆ ಸೋಂಕು ತಗಲಿದೆ.
ಇಂದು 281 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ .ಇದುವರೆಗೂ 14,960 ಜನ ಕೊರೊನಾದಿಂದ ಸಂಪೂರ್ಣ ಗುಣಮುಖರಾದಂತಾಗಿದೆ. ಇನ್ನು 2,271 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಐವರು ಸೋಂಕಿನಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 244ಕ್ಕೆ ಏರಿಕೆಯಾಗಿದೆ.