ತುಮಕೂರು: ಜಿಲ್ಲೆಯಲ್ಲಿ ಇಂದು 192 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,148ಕ್ಕೇರಿದೆ.
ಜಿಲ್ಲೆಯ ತುಮಕೂರು ತಾಲೂಕಿನಲ್ಲಿ 95 ಮಂದಿಗೆ ಸೋಂಕು ತಗುಲಿದೆ, ಪಾವಗಡ ತಾಲೂಕಿನಲ್ಲಿ 22, ತಿಪಟೂರು ತಾಲ್ಲೂಕಿನಲ್ಲಿ 13, ಶಿರಾ ಮತ್ತು ಮಧುಗಿರಿ ತಾಲೂಕಿನಲ್ಲಿ ತಲಾ 10, ತುರುವೇಕೆರೆ ತಾಲೂಕಿನಲ್ಲಿ 9, ಕುಣಿಗಲ್ ತಾಲೂಕಿನಲ್ಲಿ 11, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 8, ಗುಬ್ಬಿ ಮತ್ತು ಕೊರಟಗೆರೆ ತಾಲೂಕಿನಲ್ಲಿ ತಲಾ 7 ಮಂದಿಗೆ ಸೋಂಕು ತಗುಲಿದೆ.
174 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು 4,375 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 1,604 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 60 ವರ್ಷ ಮೇಲ್ಪಟ್ಟ 30 ಮಂದಿ ಸೋಂಕಿಗೆ ಒಳಗಾಗಿರುವುದು ಗಮನಾರ್ಹವಾಗಿದೆ. ಇಂದು ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದು ಇದುವರೆಗೂ ಜಿಲ್ಲೆಯಲ್ಲಿ 162 ಮಂದಿ ಮೃತಪಟ್ಟಿದ್ದಾರೆ.