ETV Bharat / state

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕರಾವಳಿಯಲ್ಲಿ 7 ಕೊಲೆಗಳಾಗಿದ್ದವು: ಕಟೀಲ್ - ವ್ಯಂಗ್ಯ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ 7 ಮಂದಿ ಕೊಲೆಗೀಡಾಗಿದ್ದರು. ಆದರೆ ಏಳು ಮಂದಿ ಬಿಜೆಪಿ ಶಾಸಕರು ಈ ಭಾಗದಲ್ಲಿ ಆಯ್ಕೆಯಾದ ನಂತರ ಒಂದೇ ಒಂದು ಕೊಲೆ ಪ್ರಕರಣಗಳು ನಡೆದಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ
author img

By

Published : Sep 4, 2019, 10:31 PM IST

ತುಮಕೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಕರಾವಳಿ ಭಾಗದಲ್ಲಿ 7 ಮಂದಿ ಹತ್ಯೆಗೀಡಾಗಿದ್ದರು. ಆದ್ರೆ ಏಳು ಮಂದಿ ಬಿಜೆಪಿ ಶಾಸಕರು ಈ ಭಾಗದಲ್ಲಿ ಆಯ್ಕೆಯಾದ ನಂತರ ಒಂದೇ ಒಂದು ಕೊಲೆ ಪ್ರಕರಣ ನಡೆದಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದಲ್ಲಿ ಬಿಜೆಪಿ ಸಾಂಸ್ಥಿಕ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್​ ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾರಿಗೆ ಎಷ್ಟು ಪರ್ಸೆಂಟೇಜ್ ಎಂದು ನಿಗದಿ ಮಾಡುವುದರಲ್ಲೇ ಕಾಲಕಳೆದರು. ಅದೊಂದು ರೀತಿ ಪರ್ಸೆಂಟೇಜ್ ಸರ್ಕಾರವಾಗಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಒಂದೆಡೆ ನೆರೆ, ಇನ್ನೊಂದೆಡೆ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮುಖ್ಯಮಂತ್ರಿಯವರು ಇದಕ್ಕೆ ಪೂರಕ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ

ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ನುಡಿದಂತೆ ನಡೆಯುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಕಾಂಗ್ರೆಸ್ ಮುಖಂಡರ ಕಡೆಯಿಂದ ಒಂದು ನಾಟಕ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ಈ ರೀತಿಯ ಗೊಂದಲವನ್ನು ಸೃಷ್ಟಿಸಿ ರಾಜ್ಯದಲ್ಲಿ ಸರ್ಕಾರವನ್ನು ಅತಂತ್ರ ಮಾಡುವಂತಹ ಹುನ್ನಾರ ನಡೆದಿದೆ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವಂತಹ ಶಕ್ತಿ ಯಡಿಯೂರಪ್ಪನವರಿಗಿದೆ ಎಂದು ಕಟೀಲ್​ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿಗಣೇಶ್, ನಾಗೇಶ್ ಹಾಗೂ ಸಂಸದ ಜಿ ಎಸ್ ಬಸವರಾಜು ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Intro: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕರಾವಳಿ ಭಾಗದಲ್ಲಿ 17 ಕೊಲೆ ಗಳಾಗಿದ್ದವು..... ಬಿಜೆಪಿ ರಾಜ್ಯಧ್ಯಕ್ಷ ಕಟೀಲ್ ಹೇಳಿಕೆ

ತುಮಕೂರು
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ 17 ಮಂದಿ ಕೊಲೆಯಾಗಿದ್ದರು. ಏಳು ಮಂದಿ ಬಿಜೆಪಿ ಶಾಸಕರು ಈ ಭಾಗದಲ್ಲಿ ಆಯ್ಕೆಯಾದ ನಂತರ ಒಂದೇ ಒಂದು ಕೊಲೆ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಬಿಜೆಪಿ ಪಕ್ಷದ ಸಾಂಸ್ಥಿಕ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾರಿಗೆ ಎಷ್ಟು ಪರ್ಸೆಂಟೇಜ್ ಎಂದು ನಿಗದಿ ಮಾಡುವುದರಲ್ಲಿ ಕಾಲಕಳೆದು ಅದೊಂದು ರೀತಿ ಪರ್ಸೆಂಟೇಜ್ ಸರ್ಕಾರವಾಗಿ ಪರಿವರ್ತನೆಗೊಂಡಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಒಂದೆಡೆ ನೆರೆ ಇನ್ನೊಂದೆಡೆ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು ಆದರೆ ಮುಖ್ಯಮಂತ್ರಿಗಳು ಸುಮ್ಮನಿರಲಿಲ್ಲ ಪೂರಕ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ. ನುಡಿದಂತೆ ನಡೆಯುತ್ತಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ ಆದರೆ ಇನ್ನೊಂದೆಡೆ ಕಾಂಗ್ರೆಸ್ ಮುಖಂಡರ ಒಂದು ನಾಟಕ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.
ಈ ರೀತಿಯ ಒಂದು ಗೊಂದಲವನ್ನು ಸೃಷ್ಟಿಮಾಡಿ ರಾಜ್ಯದಲ್ಲಿ ಸರ್ಕಾರವನ್ನು ಅತಂತ್ರ ಮಾಡುವಂತಹ ಹುನ್ನಾರ ನಡೆದಿದೆ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವಂತಹ ಶಕ್ತಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿಗಣೇಶ್ , ನಾಗೇಶ್ ಹಾಗೂ ಸಂಸದ ಜಿ ಎಸ್ ಬಸವರಾಜು ಹಾಜರಿದ್ದರು.

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.