ತುಮಕೂರು: 15 ದಿನಗಳಿಂದ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ತೆರೆ ಬಿದ್ದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ದೇಶದಲ್ಲಿ ನಮಗೆ ಆಹಾರ ಭದ್ರತೆ ಲಭಿಸಿದೆ. ಆಹಾರ ಉತ್ಪಾದನೆಯಲ್ಲಿ ದೇಶವು ದೊಡ್ಡ ಸಾಧನೆ ಮಾಡಿದೆ. ಇದರಲ್ಲಿ ವಿಜ್ಞಾನಿಗಳ ಪಾತ್ರ ಬಹುಮುಖ್ಯವಾದುದು. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗೂ ಪ್ರಗತಿಯನ್ನು ಸಾಧಿಸಲು ವಿಜ್ಞಾನಿಗಳು ಮತ್ತು ತಂತ್ರಜ್ಞಾನ ದೇಶದಲ್ಲಿ ಸಮರ್ಥವಾಗಿ ಬಳಕೆಯಾಗಿದೆ.
ರೈತನ ಬದುಕು ಇತ್ತೀಚಿನ ದಿನಗಳಲ್ಲಿ ಕಷ್ಟಕರದಲ್ಲಿಯೇ ಸಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಇದ್ದರೆ, ಬೆಳೆ ಕೈಗೆ ಸಿಕ್ಕಿರುವುದಿಲ್ಲ. ಬೆಳೆಯಿದ್ದರೆ ಬೆಲೆ ಸಿಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ತೊಳಲಾಡುತ್ತಿದ್ದಾರೆ. ಹೀಗಿದ್ದರೂ ರೈತರು ತಮ್ಮು ದುಡಿಮೆಯನ್ನು ಬಿಡುತ್ತಿಲ್ಲ. ನಮ್ಮೆಲ್ಲರಿಗೂ ಆಹಾರವನ್ನು ಒದಗಿಸಿ ಕೊಡುತ್ತಿದ್ದಾರೆ. ಹೀಗಾಗಿ, ರೈತ ಕೊರಗಿದರೆ ದೇಶವೇ ಕೊರಗುತ್ತದೆ ಎಂದರು.
ಓದಿ: ಮಹಜರಿಗೆ ಹೋದ ಲೇಡಿ ಇನ್ಸ್ ಪೆಕ್ಟರ್ಗೆ ವಕೀಲನಿಂದ ಅವಾಜು!... ವಿಡಿಯೋ ವೈರಲ್
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಭಾಗವಹಿಸಿದ್ದರು.