ತುಮಕೂರು: ಜಿಲ್ಲೆಯಲ್ಲಿ ಇಂದು 117 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿದೆ. ಅಲ್ಲದೆ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.
ಇಂದು ತುಮಕೂರು ತಾಲೂಕಿನಲ್ಲಿ 63, ಪಾವಗಡದಲ್ಲಿ 14, ಮಧುಗಿರಿಯಲ್ಲಿ 10, ತಿಪಟೂರಿನಲ್ಲಿ 9, ಗುಬ್ಬಿಯಲ್ಲಿ 5, ತುರುವೇಕೆರೆಯಲ್ಲಿ 6, ಚಿಕ್ಕನಾಯಕನಹಳ್ಳಿ ಮತ್ತು ಶಿರಾ ತಾಲೂಕಿನಲ್ಲಿ ತಲಾ 4, ಕುಣಿಗಲ್ ತಾಲೂಕಿನಲ್ಲಿ 2 ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಇಬ್ಬರು ಗರ್ಭಿಣಿಯರು ಸೇರಿದಂತೆ 60 ವರ್ಷ ಮೇಲ್ಪಟ್ಟ 14 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಇನ್ನೊಂದೆಡೆ 102 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು
2767 ಸೋಂಕಿತರು ಕೊರೊನಾ ಜಯಿಸಿ ಬಂದಿರುತ್ತಾರೆ. ಸದ್ಯ 980 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದ್ದು, 14 ಮಂದಿ ಐಸಿಯುನಲ್ಲಿದ್ದಾರೆ.