ಶಿವಮೊಗ್ಗ: ಪೊಲೀಸ್ ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಆಟೋ ಸಮೇತ 103 ಕೆಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆದುಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ವಿವೇಕಾನಂದ ಬಡಾವಣೆಯಲ್ಲಿ ಆಟೋದಲ್ಲಿ ಜಿಂಕೆ ಮಾಂಸ ಸಾಗಿಸುವಾಗ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಶ್ರೀರಾಂ ಪುರದ ಮಂಜುನಾಥ್ ಅಲಿಯಾಸ್ ಜಿಂಕೆ ಮಂಜು ಹಾಗೂ ಮಲ್ಲಿಗೇನಹಳ್ಳಿಯ ಉಮೇಶ್ ನಾಯ್ಕ ಎಂಬುವರನ್ನು ಬಂಧಿಸಿದ್ದಾರೆ.
ಇವರು ಆಯನೂರು ಸಮೀಪದ ಕಾಡಿನಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡಲು ಆಟೋದಲ್ಲಿ ಹೋಗುತ್ತಿರುವಾಗ ತುಂಗಾ ನಗರ ಪಿಎಸ್ಐ ತಿರುಮಲೇಶ್ ಹಾಗೂ ಶಂಕರ ವಲಯ ಅರಣ್ಯಾಧಿಕಾರಿ ಅಬ್ದುಲ್ ಮಜೀದ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.