ETV Bharat / state

ಕೋವಿಡ್ ವಿರುದ್ಧದ ಹೋರಾಟಕ್ಕೆ 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್ಸ್​

ಟಿವಿಎಸ್ ಮೋಟಾರ್ ಸಂಸ್ಥೆ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ದೇಣಿಗೆಯ ಚೆಕ್, 3 ಕೋಟಿ ರೂ. ಮೌಲ್ಯದ 100 ಆಕ್ಸಿಜನ್ ಕಾನ್ಸಂಟ್ರೇಟರ್​ಗಳು ಹಾಗೂ ವೈದ್ಯಕೀಯ ಪರಿಕರಗಳನ್ನು ಹಸ್ತಾಂತರಿಸಲಾಯಿತು.

TVS help
TVS help
author img

By

Published : May 21, 2021, 2:50 PM IST

Updated : May 25, 2021, 10:55 PM IST

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಸಂಘ-ಸಂಸ್ಥೆಗಳಿಂದ ನೆರವು ನೀಡುವುದು ಮುಂದುವರೆದಿದ್ದು, ಇಂದು ಟಿವಿಎಸ್ ಸಂಸ್ಥೆ ಆರ್ಥಿಕ ಹಾಗೂ ವೈದ್ಯಕೀಯ ಉಪಕರಣಗಳನ್ನೊಳಗೊಂಡ ತನ್ನ ನೆರವನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಟಿವಿಎಸ್ ಮೋಟಾರ್ ಸಂಸ್ಥೆ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ದೇಣಿಗೆಯ ಚೆಕ್, 3 ಕೋಟಿ ರೂ. ಮೌಲ್ಯದ 100 ಆಕ್ಸಿಜನ್ ಕಾನ್ಸಂಟ್ರೇಟರ್​ಗಳು ಹಾಗೂ ವೈದ್ಯಕೀಯ ಪರಿಕರಗಳನ್ನು ಇಂದು ಹಸ್ತಾಂತರಿಸಲಾಯಿತು.

ಕೋವಿಡ್ ವಿರುದ್ದದ ಹೋರಾಟದಲ್ಲಿ ಸರ್ಕಾರದೊಂದಿಗೆ ಟಿವಿಎಸ್ ಮೋಟಾರ್ ಸಂಸ್ಥೆ ಕೈಜೋಡಿಸಿರುವುದನ್ನು ಸಿಎಂ ಶ್ಲಾಘಿಸಿದರು. ಟಿವಿಎಸ್ ಮೋಟಾರ್ ಸಂಸ್ಥೆ ಉಪಾಧ್ಯಕ್ಷ (ಕಾರ್ಪೊರೇಟ್ ಸಂಬಂಧಗಳು) ಕರುಣಾಕರ ರೆಡ್ಡಿ, ಹಾಗೂ ಸಹ ಉಪಾಧ್ಯಕ್ಷ ಸೇತುರಾಮನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Last Updated : May 25, 2021, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.