ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಶಂಭುಲಿಂಗ ಲಿಂಗಪ್ಪ ಎಂಬುವರು ಸೇನೆಯಿಂದ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಬುಧವಾರ ಆಗಮಿಸಿದರು. 30 ವರ್ಷ ಸೇನೆಯಲ್ಲಿ ಸೇವೆಸಲ್ಲಿಸಿದ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶಂಭುಲಿಂಗಪ್ಪ ಅವರಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ನಂತರ ತೆರೆದವಾಹನದಲ್ಲಿ ಅವರನ್ನು ಮೆರವಣಿಗೆ ಮಾಡಲಾಯಿತು. ಹಾವೇರಿಯಿಂದ ಕರ್ಜಗಿಯವರೆಗೆ ಬೈಕ್ ಜಾಥಾದ ಮೂಲಕ ಶಂಭುಲಿಂಗಪ್ಪರನ್ನ ಬರಮಾಡಿಕೊಳ್ಳಲಾಯಿತು.
ಓದಿ:ರಮೇಶ್ ಜಾರಕಿಹೊಳಿಯದ್ದು ನಾಚಿಕೆಗೇಡಿನ ಕೆಲಸ: ಕೋಡಿಹಳ್ಳಿ ಚಂದ್ರಶೇಖರ್
ಹಾವೇರಿ ಶಾಸಕರಾದ ನೆಹರು ಓಲೇಕಾರ್, ಶಂಭುಲಿಂಗಪ್ಪಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಯೋಧರು, ದೇಶಾಭಿಮಾನಿಗಳು ಉಪಸ್ಥಿತರಿದ್ದರು.