ETV Bharat / state

ನುಡಿದಂತೆ ನಡೆದ ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು : ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣ

ಕೊರೊನಾ ಮೂರನೇ ಅಲೆಯ ಆತಂಕದ ಸಂದರ್ಭದಲ್ಲಿ ಆಕ್ಸಿಜನ್ ಘಟಕ ನಿರ್ಮಿಸುವ ಮೂಲಕ ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಮಾನವೀಯತೆ ಮೆರೆದಿದ್ದಾರೆ..

producer vijay kiragandur contribute oxygen plant to mandya
ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣ
author img

By

Published : Sep 7, 2021, 10:56 PM IST

Updated : Sep 8, 2021, 12:05 AM IST

ಮಂಡ್ಯ : ತಾನು ಹುಟ್ಟಿ ಬೆಳೆದ ತನ್ನ ಜಿಲ್ಲೆಯ ಜನರು‌ ಕೊರೊನಾ ಆರ್ಭಟದಲ್ಲಿ ಪ್ರಾಣವಾಯು ಕೊರತೆಯಿಂದ ನರಳಿದ್ದನ್ನು ಕಂಡ ನಿರ್ಮಾಪಕ ವಿಜಯ್​ ಕಿರಗಂದೂರು, ಆಕ್ಸಿಜನ್ ಘಟಕಗಳನ್ನು ನಿರ್ಮಿಸಿ ಕೊಡುವುದಾಗಿ ಮಾತು ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಆಕ್ಸಿಜನ್ ಪ್ಲಾಂಟ್ ನಿರ್ಮಿಸಿ ನುಡಿದಂತೆ ನಡೆದಿದ್ದಾರೆ.

ಸಕ್ಕರೆ ನಾಡು ಮಂಡ್ಯದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಿಸಿ, ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೇ ಆಕ್ಸಿಜನ್ ಕೊರತೆಯಿಂದ ನೂರಾರು ಜನರು ಸಾವನ್ನಪ್ಪಿದ್ದರು. ಈ ವೇಳೆ ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ತವರು ಜಿಲ್ಲೆಯ ಜನರಿಗಾಗಿ ಬಳಸುವ ಆಸೆಯಿಂದ ಔಷಧಿಗಳು ಹಾಗೂ ಆಕ್ಸಿಜನ್ ಘಟಕವನ್ನು ಮಂಡ್ಯ ಮೂಲದ ನಿರ್ಮಾಪಕ, ಕೆಜಿಎಫ್ ಸಿನಿಮಾದ ಸಾರಥಿ ವಿಜಯ್ ಕಿರಗಂದೂರು ಅವರು ಹೊಂಬಾಳೆ ಗ್ರೂಪ್ಸ್ ಮೂಲಕ ನಿರ್ಮಿಸಿ ಕೊಡುವುದಾಗಿ ಹೇಳಿದ್ರು.

ಅದರಂತೆ 'ಹೊಂಬಾಳೆ ಗ್ರೂಪ್' ಮೂಲಕ ಸುಮಾರು 1.80 ಕೋಟಿ ರೂ. ವೆಚ್ಚದಲ್ಲಿ ಕೆಆರ್ ಪೇಟೆ ಮತ್ತು ಪಾಂಡವಪುರದಲ್ಲಿ ತಲಾ 400 ಎಲ್‌ಪಿಎಂ ಸಾಮರ್ಥ್ಯದ ಎರಡು ಆಕ್ಸಿಜನ್ ಪ್ಲಾಂಟ್‌ಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದಕ್ಕೆ ಅಗತ್ಯ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿದ್ದಾರೆ. ಈ ಆಮ್ಲಜನಕ ಘಟಕವನ್ನ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ, ಕ್ರೀಡಾ ಮತ್ತು ರೇಷ್ಮೆ ಸಚಿವ ಕೆ ಸಿ ನಾರಾಯಣಗೌಡ ಉದ್ಘಾಟಿಸಿದರು.

1.80 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣ

ಇದಲ್ಲದೇ ಈಗಾಗಲೇ ಮಿಮ್ಸ್‌ಗೆ 21 ಬೆಡ್​ಗಳ ಐಸಿಯು ಘಟಕಕ್ಕೆ ಅಗತ್ಯವಾದ 60 ಲಕ್ಷ ರೂ. ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. 'ಹೊಂಬಾಳೆ ಐಸಿಯು' ಹೆಸರಿನಲ್ಲೇ ತುರ್ತು ಚಿಕಿತ್ಸಾ ಘಟಕವು ಬಳಕೆಯಲ್ಲಿದೆ. ಈ ಮೂಲಕ ಜಿಲ್ಲೆಯ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವೈದ್ಯಕೀಯ ಕ್ಷೇತ್ರಕ್ಕೆ 2.40 ಕೋಟಿ ರೂ. ವಿನಿಯೋಗಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಸಚಿವ ನಾರಾಯಣಗೌಡ ಸಂತಸ ಪಟ್ಟಿದ್ದಾರೆ.

ಕೊರೊನಾ ಮೂರನೇ ಅಲೆಯ ಆತಂಕದ ಸಂದರ್ಭದಲ್ಲಿ ಆಕ್ಸಿಜನ್ ಘಟಕ ನಿರ್ಮಿಸುವ ಮೂಲಕ ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಮಾನವೀಯತೆ ಮೆರೆದಿದ್ದಾರೆ.

producer vijay kiragandur contribute oxygen plant to mandya
ನಿರ್ಮಾಪಕ ವಿಜಯ್ ಕಿರಗಂದೂರು

ಇದನ್ನೂ ಓದಿ:Thalaivi: ಚಿತ್ರಮಂದಿರಗಳಿಂದ ಮಾತ್ರ ಕೋವಿಡ್ ಹೆಚ್ಚಾಗುತ್ತದೆಯೇ?: ಕಂಗನಾ ರಣಾವತ್‌

Last Updated : Sep 8, 2021, 12:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.