ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳು ಝಳಪಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡುವ ಮೂಲಕ ಖಡಕ್ ವಾರ್ನಿಂಗ್ ನೀಡಿದ್ದಾರೆ.
![police-warning-to-rowdies](https://etvbharatimages.akamaized.net/etvbharat/prod-images/3774112_thumb.jpg)
ಹಳೇ ಹುಬ್ಬಳ್ಳಿ ಹಾಗೂ ಕಸಬಾ ಪೇಟೆ ಪೊಲೀಸರಿಂದ ಏಕಕಾಲಕ್ಕೆ ದಾಳಿ ನಡೆದಿದ್ದು, ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳನ್ನು ಪರಿಶೀಲಿಸಿದರು. ನಗರದ ಹಳೇ ಹುಬ್ಬಳ್ಳಿಯ ನೇಕಾರ ನಗರದ ಈಶ್ವರ ನಗರ ಹಾಗೂ ರಣದಮ್ಮ ಕಾಲೋನಿಯಲ್ಲಿ ಪೊಲೀಸರು ರೌಡಿಗಳ ಮನೆಗಳಿಗೆ ತೆರಳಿ ಪರಿಶೀಲಿಸಿದರು. ಇನ್ನು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಸೂಚನೆಯ ಮೇರೆಗೆ ದಾಳಿ ನಡೆದಿದ್ದು, ಡಿಸಿಪಿ ಬಿ.ಎನ್.ನಾಗೇಶ, ಎಸಿಪಿ ರವಿ ನಾಯ್ಕ, ಹಳೇ ಹುಬ್ಬಳ್ಳಿ ಹಾಗೂ ಕಸಬಾ ಠಾಣೆ ಸಿಪಿಐಗಳಾದ ಮಾರುತಿ ಗುಳ್ಳಾರಿ ಹಾಗೂ ಸುರೇಶ ಕುಂಬಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಪರಿಶೀಲನೆ ವೇಳೆ ಭಾಗಿಯಾಗಿದ್ದರು.
ಸುಮಾರು 50ಕ್ಕೂ ಹೆಚ್ಚು ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸರು, ನಗರದಲ್ಲಿ ಗಲಭೆ ಎಬ್ಬಿಸದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿದರೆ ಕೂಡಲೇ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.